ಫ್ಯಾಮಿಲಿ ಜೊತೆ ಎಂಜಾಯ್ ಮೂಡ್ ನಲ್ಲಿರುವ ರೋಹಿತ್ ಶರ್ಮಾ
ಮುಂದಿನ ತಿಂಗಳು ಭಾರತದಲ್ಲಿ ಐಪಿಎಲ್ ಹಬ್ಬ ಶುರುವಾಗಲಿದೆ. ಇದಕ್ಕೂ ಮುನ್ನ ಸಮಯ ಹೊಂದಿಸಿಕೊಂಡಿರುವ ರೋಹಿತ್ ಶರ್ಮಾ, ಪತ್ನಿ ರಿತಿಕಾ ಜೊತೆ ಕಾಲ ಕಳೆಯುತ್ತಿದ್ದಾರೆ. ಪತ್ನಿ ಜೊತೆಗಿರುವ ಫೋಟೋವನ್ನು ರೋಹಿತ್ ಶರ್ಮಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನೀಲಿ ನೀರು, ನೀಲಿ ಆಕಾಶ ಹಾಗೂ ಅದ್ರ ಸುಖ ಎಂದು ಫೋಟೋಕ್ಕೆ ರೋಹಿತ್ ಶರ್ಮಾ ಶೀರ್ಷಿಕೆ ನೀಡಿದ್ದಾರೆ. ರೋಹಿತ್ ಹಾಗೂ ರಿತಿಕಾ ಸುಂದರ ಫೋಟೋವನ್ನು ಅಪ್ ಲೋಡ್ ಆದ ಅರ್ಧ ಗಂಟೆಯಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಹಿಂದಿನ ವರ್ಷ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ನಂತ್ರ ಪತ್ನಿ ಜೊತೆ ಕಾರಿನಲ್ಲಿದ್ದ ಫೋಟೋವನ್ನು ಶರ್ಮಾ ಹಂಚಿಕೊಂಡಿದ್ದರು.
Comments