ಧೋನಿ ಬಗ್ಗೆ ಮನ ಬಿಚ್ಚಿ ಮಾತನಾಡಿದ ದಿನೇಶ್ ಕಾರ್ತಿಕ್

ಬಾಂಗ್ಲಾದೇಶ ವಿರುದ್ಧದ ಫೈನಲ್ ನಲ್ಲಿ ಟೀಂ ಇಂಡಿಯಾಕ್ಕೆ ವೀರೋಚಿತ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಈಗ ಕ್ರಿಕೆಟ್ ಪ್ರಿಯರ ಪಾಲಿಗೆ ಹೀರೋ ಆಗಿದ್ದಾರೆ. ದಿನೇಶ್ ಕಾರ್ತಿಕ್ ಬೆಸ್ಟ್ ಫಿನಿಶರ್ ಅಂತಾ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಆದ್ರೆ ಕಾರ್ತಿಕ್ ಮಾತ್ರ ಮಹೇಂದ್ರ ಸಿಂಗ್ ಧೋನಿಯೇ ಬೆಸ್ಟ್ ಎಂದಿದ್ದಾರೆ. ಧೋನಿ ಯೂನಿವರ್ಸಿಟಿಯ ಟಾಪರ್, ನಾನಿನ್ನೂ ಕಲಿಕಾ ವಿದ್ಯಾರ್ಥಿ ಎಂದಿದ್ದಾರೆ. ಧೋನಿ ಜೊತೆಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ ಅಂತಾ ಅಭಿಪ್ರಾಯಪಟ್ಟಿದ್ದಾರೆ ಕಾರ್ತಿಕ್. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೂರು ತಿಂಗಳು ಮೊದಲೇ ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ಚೊಚ್ಚಲ ಪಂದ್ಯ ಆಡಿದ್ದರು. ಅದಾಗಿ 14 ವರ್ಷಗಳೇ ಕಳೆದಿವೆ. ಧೋನಿ ಯಶಸ್ವಿ ನಾಯಕ ಎಂದೆನಿಸಿಕೊಂಡಿದ್ದಾರೆ, ಆದ್ರೆ ದಿನೇಶ್ ಕಾರ್ತಿಕ್ ಮಾತ್ರ ಅವಕಾಶಗಳಿಗಾಗಿ ಈಗಲೂ ಕಾಯುವಂತಾಗಿದೆ. ಇಷ್ಟು ವರ್ಷಗಳ ಬಳಿಕ ಕಾರ್ತಿಕ್ ಪ್ರತಿಭೆ ಬೆಳಕಿಗೆ ಬಂದಿದೆ.
Comments