ದಿನೇಶ್ ಕಾರ್ತಿಕ್ ಗೆ ಪತ್ನಿಯಿಂದ ಪ್ರಶಂಸೆ...!!

ಕ್ರಿಕೆಟ್ ಪ್ರೇಮಿಗಳ ಬಾಯಲ್ಲೀಗ ದಿನೇಶ್ ಕಾರ್ತಿಕ್ ರದ್ದೇ ಜಪ. ಪಂದ್ಯದ ಕೊನೆಯ ಬಾಲ್ ಗೆ ಸಿಕ್ಸರ್ ಬಾರಿಸಿ ಭಾರತಕ್ಕೆ ನಿದಾಹಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ ಕಾರ್ತಿಕ್. ಪತ್ನಿ ದೀಪಿಕಾ ಪಳ್ಳಿಕಲ್ ಕೂಡ ದಿನೇಶ್ ಕಾರ್ತಿಕ್ ಈ ಅಧ್ಭುತ ಆಟದಿಂದ ಫುಲ್ ಖುಷಿಯಾಗಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ದಿನೇಶ್ ಕಾರ್ತಿಕ್ ಫೋಟೋ ಅಪ್ಲೋಡ್ ಮಾಡಿರೋ ದೀಪಿಕಾ, ಪ್ರೌಡ್ ವೈಫ್ ಅಂತಾ ಕ್ಯಾಪ್ಷನ್ ಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಮುದ್ದಾಗಿ ಸಾಕಿರೋ ನಾಯಿ ಫೋಟೋ ಅಪ್ಲೋಡ್ ಮಾಡಿ, ಮೈ ಡ್ಯಾಡಾ ಸೂಪರ್ ಹೀರೋ ಅಂತಾ ಕ್ಯಾಪ್ಷನ್ ಕೊಟ್ಟಿದ್ದಾರೆ. 2015ರ ಆಗಸ್ಟ್ ನಲ್ಲಿ ದಿನೇಶ್ ಕಾರ್ತಿಕ್, ದೀಪಿಕಾ ಪಳ್ಳಿಕಲ್ ರನ್ನು ಮದುವೆಯಾಗಿದ್ದರು. 2013ರ ನವೆಂಬರ್ ನಲ್ಲೇ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು.
Comments