ಯುಗಾದಿ ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರಗು ತಂದ ಟಿ -20 ಪಂದ್ಯ

ತ್ರಿಕೋನ ಟಿ -20 ಸರಣಿಯ ಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಭಾರತ, ಸತತ 3 ಟಿ -20 ಸರಣಿಯನ್ನು ಜಯಿಸಿದೆ. ವಿಶ್ವದ ಯಾವ ತಂಡವೂ 3 ಟಿ -20 ಸರಣಿ ಫೈನಲ್ ಪಂದ್ಯವನ್ನು ಜಯಿಸಿಲ್ಲ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆ ಸಾಧನೆ ಮಾಡಿದೆ.
ಟಿ -20 ಫೈನಲ್ ನಲ್ಲಿ ಅತಿಹೆಚ್ಚು ಮೊತ್ತದ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಸಾಧನೆಯನ್ನು ಭಾರತ ತಂಡ ಮಾಡಿದೆ. ಕೋಲ್ಕತ್ತದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ -20 ವಿಶ್ವಕಪ್ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ 156 ರನ್ ಗೆಲುವಿನ ಗುರಿ ಪಡೆದು ಜಯ ಸಾಧಿಸಿತ್ತು. ಕೊಲಂಬೊದಲ್ಲಿ ನಡೆದ ನಿಡದಾಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 167 ರನ್ ಗಳಿಸಿ ಭಾರತ ತಂಡ ದಾಖಲೆ ನಿರ್ಮಿಸಿದೆ.
ಕೊನೆಯ ಬಾಲ್ ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ರನ್ ಬೇಕಾದಾಗ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಟಿ -20 ಯಲ್ಲಿ 7000 ರನ್ ಪೂರೈಸಿದ 3 ನೇ ಆಟಗಾರ ಹಾಗೂ ಫೈನಲ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ 4 ನೇ ಆಟಗಾರನಾಗಿದ್ದಾರೆ. ಕೆ.ಎಲ್. ರಾಹುಲ್ ಕೇವಲ 13 ಇನ್ನಿಂಗ್ಸ್ ಗಳಲ್ಲಿ 500 ರನ್ ಪೂರೈಸಿದ್ದಾರೆ. ವಾಷಿಂಗ್ಟನ್ ಸುಂದರ್ ಲಂಕಾದಲ್ಲಿ ನಡೆದ ಟಿ -20 ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
Comments