ಐಪಿಎಲ್ ಸಮರಕ್ಕೆ ಆರ್ ಸಿಬಿ ತಂಡದ ತರಬೇತಿ ಪ್ರಾರಂಭ
ಐಪಿಎಲ್ ಟಿ20 ಪಂದ್ಯಾವಳಿಗೆ ಹಲವು ತಂಡಗಳು ತರಬೇತಿ ಕಾರ್ಯದಲ್ಲಿ ತೊಡಗಿಕೊಂಡಿವೆ ಮತ್ತೊಂದೆಡೆ ಇತರ ತಂಡಗಳನ್ನು ಮಣಿಸಲು ಆರ್ ಸಿಬಿ ತಂಡ ಹವಣಿಸುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಬಿಸಿ ಹುಡುಗರಿಗೆ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಬೌಲಿಂಗ್ ಕೋಚ್ ಆಶಿಷ್ ನೆಹ್ರಾ ಹಾಗೂ ಫೀಲ್ಡಿಂಗ್ ಕೋಚ್ ಟ್ರೆಂಟ್ ವುಡ್ ಹಿಲ್ ತರಬೇತಿ ಶುರು ಮಾಡಿಕೊಂಡಿದ್ದಾರೆ.
ಪಾರ್ಥಿವ್ ಪಟೇಲ್, ಪವನ್ ನೇಗಿ, ಅನಿರುದ್ಧ್ ಜೋಶಿ, ಮನನ್ ವೊಹ್ರಾ, ಕುಲ್ವಂತ್ ಖೆಜ್ರೋಲಿಯಾ, ಸಫ್ರಾರ್ಜ್ ಖಾನ್, ಎಂ ಅಶ್ವಿನ್, ಅಂಕಿತ್ ಚೌಧರಿ ಹಾಗೂ ಮನ್ ದೀಪ್ ಸಿಂಗ್ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ನಿಡಾಹಸ್ ತ್ರಿಕೋನ ಟಿ20 ಸರಣಿಯಿಂದ ಹೊರಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀರ್ಘದಲ್ಲೇ ಕೊಹ್ಲಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಅಂತೆಯೆ ಎಬಿಡಿ ವಿಲಿಯರ್ಸ್ ಸೇರಿದಂತೆ ಪ್ರಮುಖ ಆಟಗಾರರು ಕೂಡ ಶಿಬಿರ ಕೂಡಿಕೊಳ್ಳುವ ನಿರೀಕ್ಷೆ ಇದೆ.
Comments