ನೆಟ್ ಪ್ರ್ಯಾಕ್ಟೀಸ್ ನಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವ ಬಜ್ಜಿ

ಹೌದು ಇನ್ನೇನು ಐಪಿಎಲ್ ಮ್ಯಾಚ್ ಆರಂಭ ಗೊಳ್ಳಲಿದೆ ಎಂದು ಪ್ರೇಕ್ಷಕರಂತೂ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಆಟಗಾರರು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಹರ್ಭಜನ್ ಸಿಂಗ್ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ.
ಐಪಿಎಲ್ ಗೂ ಮುನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರ್ಯಾಕ್ಟಿಸ್ ಮಾಡ್ತಿರುವ ವಿಡಿಯೋ ಇದಾಗಿದೆ. ಬೌಲಿಂಗ್ ಒಂದೇ ಅಲ್ಲ ಬಜ್ಜಿ ಬ್ಯಾಟಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಅನೇಕ ಬಾರಿ ಕೊನೆ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ಮುಂಬೈ ತಂಡದ ಗೆಲುವಿಗೆ ಬಜ್ಜಿ ಕಾರಣರಾಗಿದ್ದರು.ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಧೋನಿ ಕೈನಲ್ಲಿದೆ. ಧೋನಿ ನಾಯಕತ್ವದಲ್ಲಿ ಬಜ್ಜಿ ಟೀಂ ಇಂಡಿಯಾದಲ್ಲಿ ಆಡಿದ್ದಾರೆ. ಧೋನಿ ಜೊತೆ ಆಟವಾಡುವುದು ನನಗೆ ಮೊದಲಿನಿಂದಲೂ ಇಷ್ಟ. ಅವ್ರ ನಾಯಕತ್ವದಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆಂದು ಬಜ್ಜಿ ಈ ಹಿಂದೆಯೇ ಟ್ವಿಟ್ ಮಾಡಿದ್ದರು.
Comments