ಬಾಲಿವುಡ್ ನಟಿ ಜೊತೆ ಡೇಟಿಂಗ್ ನಲ್ಲಿರುವ ಪಾಂಡ್ಯ

ಕ್ರಿಕೆಟ್ ಆಟಗಾರರು ಆಟಕ್ಕಿಂತ ಹೆಚ್ಚು ಗಾಸಿಪ್ ಗಳಿಗೆ ಹೆಚ್ಚು ತುತ್ತಾಗುತ್ತಾರೆ. ಹೌದು ನಾವು ಈಗ ಹೇಳಲು ಹೊರಟಿರುವುದು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರವರ ಬಗ್ಗೆ, ಬಿಗ್ ಬಾಸ್ ಮಾಜಿ ಸ್ಪರ್ಧಿ ಎಲ್ಲಿ ಅವರಾಂ ನಿಮಗೆ ಗೊತ್ತಿರಬಹುದು. ಸ್ವೀಡನ್ ಮೂಲದ ನಟಿ ಹಾಗೂ ರೂಪದರ್ಶಿ ಎಲ್ಲಿ ಈಗ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದಿದ್ದಾಳೆ ಅನ್ನೋ ಸುದ್ದಿಯಿತ್ತು.
ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಎಲ್ಲಿ ಅವರಾಂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಸಿಪ್ ಹರಿದಾಡಿತ್ತು. ಈಗ ಅದಕ್ಕೆ ಸಾಕ್ಷ್ಯ ಕೂಡ ಸಿಕ್ಕಿದೆ. ಎಲ್ಲಿ ತನ್ನ ಕಾರಿನಲ್ಲೇ ಹಾರ್ದಿಕ್ ಪಾಂಡ್ಯರನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಿದ್ದಾಳೆ. ಗೆಳತಿಗೆ ಬೈಬೈ ಹೇಳಿ ಪಾಂಡ್ಯ ಹೊರಟಿದ್ದಾರೆ. ಮಾಧ್ಯಮದವರ ಕ್ಯಾಮರಾ ನೋಡ್ತಿದ್ದಂತೆ ಎಲ್ಲಿ ಅವರಾಂ ಮುಖ ಮರೆಮಾಡಿಕೊಂಡು ಕುಳಿತಿದ್ಲು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಾರ್ದಿಕ್ ಸಹೋದರ ಕೃಣಾಲ್ ಪಾಂಡ್ಯ ಮದುವೆ ಸಮಾರಂಭದಲ್ಲೂ ಎಲ್ಲಿ ಕಾಣಿಸಿಕೊಂಡಿದ್ಲು. ಎಲ್ಲಿ ಅವರಾಂ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಆದ್ರೆ ಹಾರ್ದಿಕ್ ಪಾಂಡ್ಯ ಮಾತ್ರ ಈ ಗಾಸಿಪ್ ಗಳಿಗೆ ಕಿವಿಗೊಟ್ಟಿರಲಿಲ್ಲ. ಅದಕ್ಕೆ ಸ್ಪಷ್ಟನೆ ಕೊಡೋದಿಲ್ಲ ಎಂದುಬಿಟ್ಟಿದ್ರು. ಅಷ್ಟೇ ಅಲ್ಲ ತಾನಿನ್ನೂ ಸಿಂಗಲ್, ಆಟದ ಮೇಲಷ್ಟೆ ಗಮನ ಅಂತಾನೂ ಟ್ವೀಟ್ ಮಾಡಿದ್ದರು.
Comments