ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಹೊಸ ನಾಯಕತ್ವ...!!
ಇನ್ನೇನು ಎಲ್ಲರು ಕಾತುರದಿಂದ ಕಾಯುತ್ತಿರುವ ಐಪಿ ಎಲ್ ಶುರುವಾಗಲಿದ್ದು, ಈಗಾಗಲೇ ಯಾವ ತಂಡಕ್ಕೆ ಯಾವ ನಾಯಕರು ಎಂಬುದನ್ನು ತೀರ್ಮಾನಿಸಲಾಗಿದೆ. ಅಲ್ಲದೆ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸ್ಪಿನ್ನರ್ ಆರ್. ಅಶ್ವಿನ್ ನಾಯಕತ್ವವಹಿಸಲ್ಲಿದ್ದಾರೆ, ಎಂದು ಫೇಸ್ಬುಕ್ ಲೈವ್ ಚಾಟ್ ನಲ್ಲಿ ಪಂಜಾಬ್ ತಂಡದ ಟೀಮ್ ಡೈರೆಕ್ಟರ್ ಹಾಗೂ ಮೆಂಟರ್ ವೀರೇಂದ್ರ ಸೆಹ್ವಾಗ್ ಆರ್. ಅಶ್ವಿನ್ ರವರ ಹೆಸರು ಘೋಷಿಸಿದರು.
ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿರುವ ಅನುಭವಿ ಅಶ್ವಿನ್ಗೆ ಐಪಿಎಲ್ನಲ್ಲಿ ಇದು ಮೊದಲ ಬಾರಿ ಸಿಕ್ಕಿರುವ ನಾಯಕತ್ವದ ಜವಾಬ್ದಾರಿಯಾಗಿದೆ. ಕಳೆದೆರಡು ಆವೃತ್ತಿಗಳಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್ ಈ ಬಾರಿಯ ಹರಾಜಿನಲ್ಲಿ ತಮ್ಮ ಹಳೇ ಫೇವರಿಟ್ ಟೀಮ್ ಚೆನ್ನೈಸೂಪರ್ ಕಿಂಗ್ಸ್ ಪಾಲಾಗುವರೆಂಬ ನಿರೀಕ್ಷೆಯಿತ್ತು. ಆದರೆ 7.6 ಕೋಟಿ ರೂ.ಗೆ ಅಶ್ವಿನ್ರನ್ನು ಪಂಜಾಬ್ ಖರೀದಿಸಿತು.
‘ಟೀಮ್ ಮ್ಯಾನೇಜ್ವೆುಂಟ್ ಯುವರಾಜ್ ಸಿಂಗ್ರನ್ನು ನಾಯಕನನ್ನಾಗಿ ನೇಮಿಸುವ ಬಗ್ಗೆ ರ್ಚಚಿಸಿತ್ತು. ಯುವಿ ನನ್ನ ಆಪ್ತ ಸ್ನೇಹಿತ. ಆದರೆ ಕ್ರಿಕೆಟ್ ವಿಚಾರದಲ್ಲಿ ಗೆಳತನವನ್ನೆಲ್ಲಾ ಬದಿಗಿಟ್ಟು ಗಂಭೀರವಾಗಿ ಯೋಚಿಸ ಬೇಕಾಗುತ್ತದೆ. ಹೀಗಾಗಿ ನಾಯಕತ್ವದ ಗುಣಗಳಿರುವ ಅಶ್ವಿನ್ಗೆ ತಂಡದ ಸಾರಥ್ಯ ವಹಿಸಲಾಗಿದೆ’ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಪಂಜಾಬ್ ತಂಡವನ್ನು ಈ ಮುನ್ನ ಮ್ಯಾಕ್ಸ್ವೆಲ್(2017), ಮುರಳಿ ವಿಜಯ್(2016), ಡೇವಿಡ್ ಮಿಲ್ಲರ್(2016), ಜಾರ್ಜ್ ಬೈಲಿ(2014, 15), ಡೇವಿಡ್ ಹಸ್ಸೆ (2012,13), ಗಿಲ್ಕ್ರಿಸ್ಟ್ (2011, 12), ಜಯವರ್ಧನೆ(2010), ಸಂಗಕ್ಕರ (2009) ಹಾಗೂ ಯುವರಾಜ್ (2008) ಮುನ್ನಡೆಸಿದ್ದರು. –ಏಜೆನ್ಸೀಸ್
Comments