ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ ಧೋನಿ ವರ್ತನೆ

ಕೂಲ್ ಕ್ಯಾಪ್ಟನ್ ಅಂತಾನೇ ಫೇಮಸ್ ಆಗಿರುವ ಮಹೇಂದ್ರ ಸಿಂಗ್ ಧೋನಿ, ಯಾವುದೇ ಸಮಯದಲ್ಲೂ ತಮ್ಮ ಸಹನೆ ಕಳೆದು ಕೊಳ್ಳದೆ ತಂಡವನ್ನು ಮುನ್ನೆಡೆಸುತ್ತಿದ್ದರು.ಇದು ಧೋನಿಯವರ ಸ್ಪೆಷಾಲಿಟಿ ಅಂತ ಹೆಳಿತಿದ್ರು ಅವರ ಅಭಿಮಾನಿಗಳು. ಆದ್ರೆ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಧೋನಿಯ ಕೋಪ ಬಹಿರಂಗವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಮನೀಶ್ ಪಾಂಡೆ 79 ಹಾಗೂ ಧೋನಿ 52 ರನ್ ಗಳಿಸಿದ್ರು. ಪಂದ್ಯದ 20ನೇ ಓವರ್ ನಲ್ಲಿ ಸಹನೆ ಕಳೆದುಕೊಂಡ ಧೋನಿ, ಮನೀಶ್ ಪಾಂಡೆಯನ್ನು ನಿಂದಿಸಿದ್ದಾರೆ. ಧೋನಿಯ ಬೈಗುಳ ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ. ಮೈದಾನದ ಸುತ್ತ ಮುತ್ತ ಯಾಕೆ ನೋಡ್ತಿದ್ದೀಯಾ? ಈ ಕಡೆ ನೋಡು ಅಂತಾ ಧೋನಿ ಪಾಂಡೆಗೆ ಜೋರು ಮಾಡಿದ್ದಾರೆ. ಕೆಟ್ಟ ಪದವೊಂದನ್ನು ಕೂಡ ಬಳಸಿದ್ದಾರೆ. ಧೋನಿಯ ಈ ವರ್ತನೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿರೋದಂತೂ ಸುಳ್ಳಲ್ಲ. ಫೆಬ್ರವರಿ 24ರಂದು ಕೇಪ್ ಟೌನ್ ನಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದೆ.
Comments