ಡ್ರಮ್ಸ್ ಶಬ್ಧಕ್ಕೆ ಹೆಜ್ಜೆ ಹಾಕಿದ ಪಾಂಡ್ಯ
ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ 13ರಂದು ಪೋರ್ಟ್ ಎಲಿಜಬೆತ್ ನಲ್ಲಿ ಟೀಂ ಇಂಡಿಯಾ ಐದನೇ ಏಕದಿನ ಪಂದ್ಯವನ್ನಾಡಲಿದೆ. ಪೋರ್ಟ್ ಎಲಿಜಬೆತ್ ತಲುಪಿದ ಆಟಗಾರರಿಗೆ ಹೊಟೇಲ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಆಟಗಾರರನ್ನು ಸ್ವಾಗತಿಸಲಾಯ್ತು. ಡ್ರಮ್ಸ್ ಬಾರಿಸಿ ಆಟಗಾರರಿಗೆ ಸ್ವಾಗತ ಕೋರಲಾಯ್ತು. ಹೊಟೇಲ್ ಒಳಗೆ ಪ್ರವೇಶ ಮಾಡ್ತಿದ್ದ ಪಾಂಡ್ಯ ಡ್ರಮ್ಸ್ ಶಬ್ಧಕ್ಕೆ ಹೆಜ್ಜೆ ಹಾಕಿದ್ರು. ಕೆಲ ಆಟಗಾರರು ಇದನ್ನು ಎಂಜಾಯ್ ಮಾಡಿದ್ದಾರೆ. ಬಿಸಿಸಿಐ ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದೆ. ಐದನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸುವ ಅವಕಾಶ ಟೀಂ ಇಂಡಿಯಾ ಬಳಿಯಿದೆ. ನಾಲ್ಕನೇ ಪಂದ್ಯದಲ್ಲಿ ಸೋಲುಂಡಿರುವ ಟೀಂ ಇಂಡಿಯಾ ಐದನೇ ಪಂದ್ಯ ಗೆದ್ದು ಸರಣಿ ಗೆಲ್ಲುವ ಆಶಯದಲ್ಲಿದೆ. ಆದ್ರೆ ಪೋರ್ಟ್ ಎಲಿಜಬೆತ್ ನಲ್ಲಿ ಪಂದ್ಯ ಗೆಲ್ಲೋದು ಸುಲಭದ ಮಾತಲ್ಲ. ಪೋರ್ಟ್ ಎಲೆಜಬೆತ್ ನಲ್ಲಿ ಈವರೆಗೂ ಟೀಂ ಇಂಡಿಯಾ ಗೆಲುವು ಸಾಧಿಸಿಲ್ಲ.
Comments