ಕ್ರಿಕೆಟ್‌ಗಾಗಿ ಧೋನಿಯ ತ್ಯಾಗ ನಿಜಕ್ಕೂ ಗ್ರೇಟ್!

2015 ಫೆ.6ರಂದು ಧೋನಿ ಮಗಳು ಜೀವಾ ಪ್ರಪಂಚಕ್ಕೆ ಕಾಲಿಟ್ಟಿರುವ ದಿನ. ಆದ್ರೆ ಈ ಸಂದರ್ಭದಲ್ಲಿ ಧೋನಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾಗಿಯಾಗಿದ್ದರು. ಇನ್ನು ಮಗಳು ಹುಟ್ಟಿರುವ ಖುಷಿಯನ್ನು ಪತ್ನಿ ಸಾಕ್ಷಿ ಧೋನಿಗೆ ತಿಳಿಸಲು ಬಹಳ ಕಷ್ಟಪಟ್ಟಿದ್ದರು. ಆ ಸಮಯದಲ್ಲಿ ಧೋನಿಗೆ ಸಿಹಿ ಸುದ್ದಿ ತಿಳಿಸಲು ಸಾಕ್ಷಿಗೆ ಸಾಧ್ಯವಾಗಿರಲಿಲ್ಲ.
ಧೋನಿ ಪತ್ನಿ ಸಾಕ್ಷಿ ಸುರೇಶ್ ರೈನಾ ಮೊಬೈಲ್‌ಗೆ ಮಗು ಹುಟ್ಟಿರುವ ಬಗ್ಗೆ ಮೇಸೆಜ್ ಮಾಡಿದ್ದರು. ಧೋನಿಗೆ ವಿಷಯ ತಿಳಿಸುವಂತೆ ಸೂಚಿಸಿದ್ರು. ಇನ್ನು ಮಗು ಹುಟ್ಟಿರುವ ಬಗ್ಗೆ ರೈನಾ ಧೋನಿಗೆ ತಿಳಿಸಿದ್ದರು. ಬಳಿಕ ಧೋನಿಗೆ ಹೆಣ್ಣು ಮಗುವಾಗಿರುವ ವಿಚಾರ ತಿಳಿಯಿತು. ಮೊದಲ ಮಗು ಹುಟ್ಟುವ ಸಂದರ್ಭದಲ್ಲಿ ಧೋನಿ ಕುಟುಂಬದ ಜೊತೆ ಇರದಿರುವುದು ಅವರಿಗೆ ಕೊಂಚ ಬೇಸರ ಮೂಡಿಸಿತ್ತು. ಜೀವಾಳನ್ನು ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಧೋನಿ ಕ್ರಿಕೆಟ್‌ನ್ನು ಪೂಜಿಸುತ್ತಾರೆ. ಹಾಗಾಗಿ ಈ ಸಲವೂ ಮಗಳ ಹುಟ್ಟುಹಬ್ಬಕ್ಕೆ ಗೈರಾಗಿದ್ದಾರೆ. ಇಂದು ಜೀವಾಳ ಮೂರನೇ ಹುಟ್ಟುಹಬ್ಬ. ಸದ್ಯ ದಕ್ಷಿಣಾ ಆಫ್ರಿಕಾ ಪ್ರವಾಸದಲ್ಲಿರುವ ಧೋನಿ, ಮಗಳ ಮೂರನೇ ಬರ್ತ್‌ಡೇಯನ್ನು ಮಿಸ್ ಮಾಡಿಕೊಂಡಿದ್ದಾರೆ. ಕ್ರಿಕೆಟ್‌ಗಾಗಿ ಧೋನಿ ಮಗಳ ಬರ್ತಡೇಯನ್ನು ಮಿಸ್ ಮಾಡಿಕೊಂಡಿದ್ದು, ಅವರ ಈ ತ್ಯಾಗ ನಿಜಕ್ಕೂ ಗ್ರೇಟ್.
Comments