ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ
ಗಂಗೂಲಿ 146 ಪಂದ್ಯಗಳನ್ನಾಡಿ ಈ ದಾಖಲೆ ಮಾಡಿದ್ದರು. ಆದ್ರೆ ವಿರಾಟ್ ಕೇವಲ 44 ಪಂದ್ಯಗಳಲ್ಲೇ ನಾಯಕನಾಗಿ 11 ಸೆಂಚುರಿ ಬಾರಿಸಿದ್ದಾರೆ. ಕ್ಯಾಪ್ಟನ್ ಆಗಿ ಗಂಗೂಲಿ 11 ಶತಕ ಹಾಗೂ 30 ಅರ್ಧ ಶತಕಗಳ ಸಹಾಯದಿಂದ 38.79 ಸರಾಸರಿಯಲ್ಲಿ 5082 ರನ್ ಗಳಿಸಿದ್ದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ರನ್ ಮಷಿನ್ ಅನ್ನೋ ಹೆಸರು ಸುಖಾಸುಮ್ಮನೆ ಬಂದಿಲ್ಲ. ನಾಯಕನ ಜವಾಬ್ಧಾರಿಯ ಜೊತೆಗೆ ಬ್ಯಾಟಿಂಗ್ ನಲ್ಲೂ ಕಮಾಲ್ ಮಾಡ್ತಿದ್ದಾರೆ ಕೊಹ್ಲಿ. ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಇದು ಕೊಹ್ಲಿಯ 33ನೇ ಏಕದಿನ ಶತಕ. ಇದರೊಂದಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಗಂಗೂಲಿ ನಾಯಕನಾಗಿ 11 ಶತಕ ಬಾರಿಸಿದ್ದರು. ಕೊಹ್ಲಿ ಕೂಡ ನಾಯಕನಾಗಿ ಈಗಾಗ್ಲೇ 11 ಶತಕ ಸಿಡಿಸಿದ್ದಾರೆ. ಧೋನಿ ಹಾಗೂ ಸಚಿನ್ ನಾಯಕರಾಗಿದ್ದಾಗ ತಲಾ 6 ಶತಕ ಸಿಡಿಸಿದ್ದರು. ಆಡಿದ ಎಲ್ಲಾ ದೇಶಗಳಲ್ಲೂ ಶತಕ ಬಾರಿಸಿರೋದು ಕೊಹ್ಲಿ ವಿಶೇಷತೆ. ಈ ಹಿಂದೆ ಸಚಿನ್ ಹಾಗೂ ಜಯಸೂರ್ಯ ಮಾತ್ರ ಇಂತಹ ವಿಶಿಷ್ಟ ಸಾಧನೆ ಮಾಡಿದ್ದರು
Comments