ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನ ಗೆದ್ದ ಮೇರಿ ಕೋಮ್

02 Feb 2018 11:32 AM | Sports
312 Report

ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದ ಫೈನಲ್ ನಲ್ಲಿ ಮೇರಿ ಕೋಮ್ 4-1 ರಿಂದ ಫಿಲಿಫೈನ್ಸ್ ನ ಜೋಸ್ ಗಬುಕೋ ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇನ್ನು ಪುರುಷರ 60 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಮನೀಷ್ ಕೌಶಿಕ್ ಚಿನ್ನ ಗೆದ್ದಿದ್ದಾರೆ. ಉಳಿದಂತೆ ಸಂಜೀತ್ ಚಿನ್ನ, ಎಲ್ ಸರಿತಾದೇವಿ ಬೆಳ್ಳಿ, ಸತೀಶ್ ಕುಮಾರ್ ಬೆಳ್ಳಿಯ ಪದಕಕ್ಕೆ ತೃಪ್ತರಾಗಿದ್ದಾರೆ.

Edited By

Shruthi G

Reported By

Madhu shree

Comments