ನಿಯಮ ಉಲ್ಲಂಘಿಸಿದ ಕಾರಣ ಕ್ರಿಕೆಟಿಗನಿಗೆ ಬಿಸಿಸಿಐ 2 ಪಂದ್ಯಗಳಿಂದ ನಿಷೇಧ ಹೇರಿದೆ

ಸೈಯದ್ ಮುಷ್ತಾಖ್ ಅಲಿ ಟ್ರೋಫಿಯಲ್ಲಿ ಜನವರಿ 11ರಂದು ನಡೆದ ಕರ್ನಾಟಕ-ಹೈದ್ರಾಬಾದ್ ನಡುವಣ ಪಂದ್ಯದ ವೇಳೆ ರಾಯುಡು ನಿಯಮ ಉಲ್ಲಂಘಿಸಿದ್ದಾರೆ. ಹಾಗಾಗಿ ವಿಜಯ್ ಹಜಾರೆ ಟ್ರೋಫಿಯ ಮೊದಲೆರಡು ಪಂದ್ಯಗಳಲ್ಲಿ ಅಂಬಾಟಿ ರಾಯುಡು ಆಡುವಂತಿಲ್ಲ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ರಾಯುಡು ಅಂಪೈರ್ ಗಳ ಜೊತೆ ವಾಗ್ವಾದಕ್ಕಿಳಿದಿದ್ದರು.
ಹಾಗಾಗಿ ಕರ್ನಾಟಕದ ಸ್ಕೋರ್ ಗೆ 2 ರನ್ ಸೇರಿತ್ತು. ಆದ್ರೆ ರಿಪ್ಲೇನಲ್ಲಿ ಫೀಲ್ಡರ್ ಬೌಂಡರಿ ಸ್ಪರ್ಷಿಸಿರೋದು ಗೋಚರಿಸಿತ್ತು. ಈ ವಿಚಾರವನ್ನು ಹೈದ್ರಾಬಾದ್ ತಂಡಕ್ಕೆ ಮೊದಲೇ ತಿಳಿಸಲಾಗಿತ್ತು. ಆದ್ರೆ ಕಾಕತಾಳೀಯ ಎಂಬಂತೆ ಹೈದ್ರಾಬಾದ್ ತಂಡ 2 ರನ್ ಗಳಿಂದ ಪಂದ್ಯ ಸೋತಿತ್ತು. ಹಾಗಾಗಿ ಪಂದ್ಯ ಟೈ ಆಗಿದೆ ಎಂದು ಘೋಷಿಸಬೇಕು ಜೊತೆಗೆ ಸೂಪರ್ ಓವರ್ ಆಡಿಸಬೇಕು ಅಂತಾ ಅಂಬಾಟಿ ರಾಯುಡು ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಅಂಪೈರ್ ಗಳ ಜೊತೆ ವಾಗ್ವಾದ ನಡೆಸಿದ್ದರು. ಇದರಿಂದಾಗಿ ಆಂಧ್ರ ಹಾಗೂ ಕೇರಳ ನಡುವಣ ಪಂದ್ಯ ವಿಳಂಬವಾಗಿತ್ತು.
Comments