ಪಾಕ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ತೀವ್ರ ಕುತೂಹಲ ಮೂಡಿಸಿದ್ದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಭಾರತದ ಪರವಾಗಿ ಪೃಥ್ವಿ ಶಾ 41, ಮನ್ ಜೋತ್ ಕಾರ್ಲಾ 47, ಶುಭಮನ್ ಗಿಲ್ ಅಜೇಯ 102, ಅಂಕುಲ್ ರಾಯ್ 33 ರನ್ ಗಳಿಸಿದರು. ಪಾಕ್ ಪರವಾಗಿ ಮೊಹಮ್ಮದ್ ಮುಸಾ 4, ಅರ್ಶಾದ್ ಇಕ್ಬಾಲ್ 3 ವಿಕೆಟ್ ಗಳಿಸಿದ್ದಾರೆ.
ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 203 ರನ್ ಅಂತರದಿಂದ ಭರ್ಜರಿ ಜಯಗಳಿಸಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಗೆಲುವಿನ ಓಟವನ್ನು ಮುಂದುವರೆಸಿರುವ ಪೃಥ್ವಿ ಶಾ ಬಳಗ ಅಂಡರ್ 19 ವಿಶ್ವಕಪ್ ನಲ್ಲಿ ಗೆಲುವಿನ ಹಾದಿಯಲ್ಲಿ ಮುನ್ನಡೆದಿದೆ. 273 ರನ್ ಗೆಲುವಿನ ಗುರಿ ಪಡೆದ ಪಾಕ್ ಆರಂಭದಲ್ಲೇ ಮುಗ್ಗರಿಸಿದೆ. 29.3 ಓವರ್ ಗಳಲ್ಲಿ 69 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ. ಭಾರತದ ಪರ ಮಾರಕ ದಾಳಿ ನಡೆಸಿದ ಇಶಾನ್ ಪೊರೆಲ್ 4, ರಿಯಾನ್ ಪರಾಗ್ 2, ಶಿವ ಸಿಂಗ್ 2, ಅಕುಲ್ ರಾಯ್ 1, ಅಭಿಷೇಕ್ ಶರ್ಮಾ 1 ವಿಕೆಟ್ ಪಡೆದರು. ಪಾಕ್ ಪರವಾಗಿ ರೋಹಿಲ್ ನಾಝಿರ್ 18, ಸಾದ್ ಖಾನ್ 15, ಮೊಹಮ್ಮದ್ ಮುಸಾ 11 ರನ್ ಗಳಿಸಿದ್ದು, ಉಳಿದವರು ಎರಡಂಕಿ ತಲುಪಲಿಲ್ಲ. ಫೈನಲ್ ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
Comments