ಟೆಸ್ಟ್ ಸೋಲಿನ ಬೇಸರ ಮರೆತು ಎಂಜಾಯ್ ಮೂಡ್ ನಲ್ಲಿ ಕೊಹ್ಲಿ ಬಾಯ್ಸ್

ಸರಣಿ ಸೋತರೂ ಕೊನೆ ಪಂದ್ಯವನ್ನಾದ್ರೂ ಗೆದ್ದಿದ್ದೇವಲ್ಲ ಅನ್ನೋ ಸಮಾಧಾನ ಆಟಗಾರರಲ್ಲಿದೆ. ಹಾಗಾಗಿ ಎಲ್ರೂ ಸೇರಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಗೆ ಮಹೇಂದ್ರ ಸಿಂಗ್ ಧೋನಿ ಕೂಡ ಹಾಜರಾಗಿದ್ರು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯಗಳು ನಡೆಯುವುದರಿಂದ ಧೋನಿ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಎಲ್ಲರೂ ಜೊತೆಯಾಗಿ ರೆಸ್ಟೋರೆಂಟ್ ಒಂದರಲ್ಲಿ ಭೂರಿ ಭೋಜನದೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ.
ಮೂರನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾವನ್ನು 63 ರನ್ ಗಳಿಂದ ಮಣಿಸಿರುವ ಟೀಂ ಇಂಡಿಯಾ ಮತ್ತೆ ಲಯಕ್ಕೆ ಮರಳಿದೆ. ಮೊದಲೆರಡು ಟೆಸ್ಟ್ ಸೋಲಿನ ಬೇಸರ ಮರೆತು ಕೊಹ್ಲಿ ಬಾಯ್ಸ್ ಎಂಜಾಯ್ ಮಾಡ್ತಿದ್ದಾರೆ.
Comments