ಕುತೂಹಲ ಕೆರಳಿಸಿರುವ ಐಪಿಎಲ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ

ಬಿಡ್ಡಿಂಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮರು ಪ್ರವೇಶ ಪಡೆದಿದ್ದು, ಒಟ್ಟು 578 ಸ್ಟಾರ್ ಆಟಗಾರರು ಬಿಡ್ಡಿಂಗ್ ಪಟ್ಟಿಯಲ್ಲಿದ್ದಾರೆ. 322 ಹೊಸ ಆಟಗಾರರು, 244 ಹಳೆ ಆಟಗಾರರು ಬಿಡ್ಡಿಂಗ್ನಲ್ಲಿದ್ದಾರೆ. ಇದರಲ್ಲಿ 360 ಭಾರತೀಯ ಆಟಗಾರರಿದ್ದಾರೆ. ಆಸ್ಟ್ರೇಲಿಯ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ(54) ಹರಾಜಿಗೆ ಸಿದ್ಧವಾಗಿದ್ದಾರೆ.
ಕುತೂಹಲ ಕೆರಳಿಸಿರುವ ಐಪಿಎಲ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಆರಂಭವಾಗಿದ್ದು, ಎರಡು ದಿನಗಳ ಈ ಪ್ರಕ್ರಿಯೆ ರವಿವಾರವೂ ಮುಂದುವರಿಯಲಿದೆ. ಭಾರತದ ಅಶ್ವಿನ್,ಶಿಖರ್ ಧವನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್, ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ, ಹಾಗೂ ಕೆಎಲ್ ರಾಹುಲ್ ಸಹಿತ ಒಟ್ಟು 13 ಸ್ಟಾರ್ ಆಟಗಾರರು 2 ಕೋ.ರೂ.ಗರಿಷ್ಠ ಮೂಲ ಬೆಲೆ ಹೊಂದಿದ್ದಾರೆ.
Comments