ಧೋನಿ ಸ್ಟಂಪ್ ಔಟ್ ನಿಂದ ಬಚಾವ್ ಆಗಲು ಹೋಗಿ ಟ್ರೋಲ್ ಗೆ ಗುರಿಯಾದ ಪಾಕ್ ಕ್ರಿಕೆಟಿಗ !

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕ್ ನಾಯಕ ಸರ್ಫರಾಜ್ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದೇ ಔಟ್ ಆದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸ್ಟೈಲ್ ನಲ್ಲೇ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪಾಕ್ ನಾಯಕ ಔಟಾದರೂ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ರೀತಿ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಔಟಾಗಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಎಂಎಸ್ ಧೋನಿ ಕಳೆದ ವರ್ಷ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಂಡು ಸುದ್ದಿಯಾಗಿದ್ದರು. ಪಾಕ್ ನಾಯಕ ಸಹ ಧೋನಿ ರೀತಿ ಸ್ಟಂಪ್ ಔಟ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಔಟಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೆಟಿಜೆನ್ಸ್ ನಗೆಯ ಜಟಾಕಿ ಹರಿಸಿದ್ದಾರೆ.
Comments