ಕೊಹ್ಲಿ ಲೀಡರ್ ಶಿಪ್ ಬಗ್ಗೆ ದಕ್ಷಿಣ ಅಫ್ರಿಕಾ ಕ್ರಿಕೆಟರ್ ಹೇಳಿದ್ದೇನು ?

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ, ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕೈ ಚೆಲ್ಲಿದ್ದು, ಮೂರನೇ ಪಂದ್ಯ ಗೆಲ್ಲುವ ಪ್ರಯತ್ನದಲ್ಲಿದೆ.
ಭಾರತದ ಸೋಲಿನಿಂದ ಆಘಾತಗೊಂಡಿರುವ ಕ್ರಿಕೆಟ್ ಅಭಿಮಾನಿಗಳು ಈ ಸೋಲಿಗೆ ನಾನಾ ಕಾರಣಗಳನ್ನು ಹೇಳುತ್ತಿದ್ದಾರೆ. ಅಲ್ಲದೆ ಎರಡನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡಿರುವುದು ಸುದ್ದಿಯಾಗಿತ್ತು. ಈ ಮಧ್ಯೆ ಕೊಹ್ಲಿ ನಾಯಕತ್ವದ ಕುರಿತು ಸೌತ್ ಆಫ್ರಿಕಾದ ಮಾಜಿ ನಾಯಕ ಗ್ರಹಮ್ ಸ್ಮಿತ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕರಾಗಿ ಬಹು ಕಾಲ ಮುಂದುವರೆಯುವ ಭರವಸೆ ತಮಗಿಲ್ಲವೆಂದು ಹೇಳಿರುವ ಗ್ರಹಮ್ ಸ್ಮಿತ್, ಮೈದಾನದಲ್ಲಿ ವಿರಾಟ್ ಕೊಹ್ಲಿಯವರಿಗೆ ಸಲಹೆ, ಸಹಕಾರ ನೀಡುವ ಆಟಗಾರರೊಬ್ಬರ ಅಗತ್ಯವಿದೆ ಎಂದಿದ್ದಾರೆ.
Comments