ಅಲೆಕ್ಸ್ ಕೆರ್ರಿಯ ವಿಸ್ಮಯಗೊಳಿಸುವ 'ರನ್ ಔಟ್'ನ್ನು ಮಿಸ್ ಮಾಡ್ದೆ ನೋಡಿ ..!!

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ 5 ಏಕ ದಿನ ಪಂದ್ಯಗಳು ನಡೆಯುತ್ತಿದ್ದು, ಇಂಗ್ಲೆಂಡ್ ಈಗಾಗಲೇ 2-0 ಅಂತರದಿಂದ ಜಯ ಗಳಿಸಿದೆ. ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ಇಂಗ್ಲೆಂಡ್ ಕೈ ವಶವಾಗುತ್ತದೆ.
ಈ ಮಧ್ಯೆ ಎರಡನೇ ಏಕ ದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಕ್ರಿಸ್ ವೋಕ್ಸ್, ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕೆರ್ರಿಯವರನ್ನು ರನ್ ಔಟ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 48 ನೇ ಓವರ್ ಬೌಲ್ ಮಾಡುತ್ತಿದ್ದ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಕ್ಯಾಮೆರೂನ್ ವೈಟ್ ಭಾರೀ ಹೊಡೆತಕ್ಕೆ ಯತ್ನಿಸಿದರೂ ಅದು ವಿಫಲವಾಗಿದ್ದು, ಚೆಂಡು ಸನಿಹದಲ್ಲೇ ಬಿದ್ದಿದೆ. ಆದರೂ ವೇಗವಾಗಿ ಒಂದು ರನ್ ಪಡೆಯಲು ಓಡಿದ್ದು, ಆದರೆ ಬೌಲರ್ ಕ್ರಿಸ್ ವೋಕ್ಸ್ ಕೂಡಲೇ ಧಾವಿಸಿ ತಮ್ಮ ಕಾಲಿನಿಂದಲೇ ವಿಕೆಟ್ ಕಡೆಗೆ ಚೆಂಡನ್ನು ಒದ್ದಿದ್ದಾರೆ. ಹೀಗಾಗಿ ಬೌಲರ್ ತುದಿಯಿಂದ ರನ್ ಗಾಗಿ ಓಡುತ್ತಿದ್ದ ಅಲೆಕ್ಸ್ ಕೆರ್ರಿ ಸುಲಭವಾಗಿ ಔಟಾಗಿದ್ದಾರೆ. ( Woakes' fancy footwork catches Carey short )
Comments