ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಟಾಂಗ್ ಕೊಟ್ಟ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಭರ್ಜರಿ ಆಟವಾಡಿದ್ದು, 150 ರನ್ ಗಳಿಸಿದ್ದರು. 150 ರನ್ ಸಿಡಿಸಿದ ಸಂಭ್ರಮಾಚರಣೆ ವೇಳೆ ಕೊಹ್ಲಿ ತಾವು ಮದುವೆಯಲ್ಲಿ ಅನುಷ್ಕಾರಿಂದ ಪಡೆದಿದ್ದ ವೆಡ್ಡಿಂಗ್ ರಿಂಗ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಲ್ಲದೇ ಅದಕ್ಕೆ ಕ್ರೀಡಾಂಗಣದಲ್ಲೇ ಮುತ್ತು ನೀಡಿ ನೇರವಾಗಿ ಅನುಷ್ಕಾ ಬೆಂಬಲಕ್ಕೆ ನಿಂತರು.
ಆ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ಕೊಹ್ಲಿ ನೇರವಾಗಿಯೇ ಟಾಂಗ್ ನೀಡಿದ್ದಾರೆ. ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಟಾಂಗ್ ನೀಡಿದ್ದು, ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿ ಪತ್ನಿ ನೀಡಿದ್ದ ಮದುವೆ ಉಂಗುರಕ್ಕೆ ಮೈದಾನದಲ್ಲೇ ಮುತ್ತು ಕೊಟ್ಟಿದ್ದಾರೆ. ಈ ಹಿಂದೆ ಕೇಪ್ ಟೌನ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳಪೆ ಆಟವಾಡಿದ್ದರು.. ಈ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಕ್ರೀಡಾಂಗಣದಲ್ಲಿದ್ದರು. ಅಂದು ಅನುಷ್ಕಾ ಕೊಹ್ಲಿ ಜೊತೆಗಿದ್ದರಿಂದಲೇ ಕೊಹ್ಲಿ ಕಳಪೆ ಆಟವಾಡಿದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು, ಟ್ವಿಟರ್ ನಲ್ಲಿ ಅನುಷ್ಕಾರನ್ನು ವ್ಯಾಪಕ ಟ್ರೋಲ್ ಮಾಡಲಾಗಿತ್ತು. ಆದರೆ ಪತ್ನಿ ಅನುಷ್ಕಾ ಕುರಿತು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಕೊಹ್ಲಿ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಇನ್ನು ಕೊಹ್ಲಿ ವೆಡ್ಡಿಂಗ್ ರಿಂಗ್ ಗೆ ಕಿಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Comments