ಮ್ಯಾಕ್ಸ್ ವೆಲ್ ಹಿಡಿದ ಕ್ಯಾಚ್ ನೋಡಿ ಕ್ರಿಕೆಟ್ ಜಗತ್ತೇ ದಂಗಾಗಿದೆ

ಕಳಪೆ ಫಾರ್ಮ್ ನಿಂದ ಸ್ಥಾನ ಕಳೆದುಕೊಂಡಿದ್ದ ಮ್ಯಾಕ್ಸ್ ವೆಲ್ ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ನಲ್ಲಿ ಅದ್ಭುತ ಆಟವಾಡಿದ್ದಾರೆ. ಮೆಲ್ಬರ್ನ್ ಡೆನಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ಹಿಡಿದ ಕ್ಯಾಚ್ ನೋಡಿ ಕ್ರಿಕೆಟ್ ಜಗತ್ತೇ ದಂಗಾಗಿದೆ.
ಗ್ಲೆನ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಇತ್ತು. ಕ್ರಿಸ್ ಲಿನ್ ಗಾಯಗೊಂಡಿರುವುದರಿಂದ ಮ್ಯಾಕ್ಸ್ ವೆಲ್ ಗೆ ಸ್ಥಾನ ಸಿಗುವ ಚಾನ್ಸ್ ಹೆಚ್ಚಾಗಿತ್ತು. ಆದ್ರೆ ಆಯ್ಕೆ ಸಮಿತಿ ಸದಸ್ಯರು ಕೆಮರೂನ್ ವೈಟ್ ಗೆ ಮಣೆ ಹಾಕಿದ್ದಾರೆ. ಬಿಬಿಎಲ್ ನಲ್ಲಿ ಮ್ಯಾಕ್ಸ್ ವೆಲ್ ಬಾರಿಸಿದ್ದ ರಿವರ್ಸ್ ಸ್ವೀಪ್ ಶಾಟ್ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಯಾರೂ ಊಹೆ ಮಾಡಿಕೊಳ್ಳಲಾಗದ ರೀತಿಯಲ್ಲಿ ಸ್ವೀಪ್ ಶಾಟ್ ಬಾರಿಸಿದ್ದರು ಮ್ಯಾಕ್ಸ್ ವೆಲ್. ಇದೀಗ ಅವರ ಫೀಲ್ಡಿಂಗ್ ನೋಡಿ ಎಲ್ರೂ ಜೂನಿಯರ್ ಜಾಂಟಿ ರೋಡ್ಸ್ ಅಂತಾ ಕಮೆಂಟ್ ಮಾಡ್ತಿದ್ದಾರೆ.
Comments