ರಾಷ್ಟ್ರೀಯ ಗಾಲ್ಫ್ ನಲ್ಲಿ ಫೈನಲ್ ಪ್ರವೇಶಿಸಿದ ನಟ

11 Jan 2018 12:10 PM | Sports
398 Report

ಹೌದು ಇದೂ ಯಾವುದೋ ಸಿನಿಮಾಕ್ಕಾಗಿ ಮಾಧವನ್ ಗಾಲ್ಫ್ ಸ್ಟಿಕ್ ಹಿಡಿದು ಪೋಸ್ ಕೊಟ್ಟಿಲ್ಲ. 'ಅಲೈಪಾಯುದೈ' ಹೀರೋ ಮುಂಬೈ ಅರ್ಹತಾ ಸುತ್ತಿನಲ್ಲಿ ಗೆದ್ದು, ರಾಷ್ಟ್ರೀಯ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿದ್ದಾರೆ. ಏಪ್ರಿಲ್ 4ರಿಂದ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಇದೀಗ ರಾಷ್ಟ್ರೀಯ ಗಾಲ್ಫ್ ಚಾಂಪಿಯನ್'ಶಿಪ್'ನ ಫೈನಲ್ಸ್'ಗೆ ಆಯ್ಕೆಯಾಗಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇಲ್ಲಿನ ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್'ನಲ್ಲಿ ನಡೆದ ಮರ್ಸಿಡೆಸ್ ಗಾಲ್ಫ್ ಟ್ರೋಫಿ ಪಂದ್ಯಾವಳಿಯಲ್ಲಿ 69.6 ಅಂಕಗಳನ್ನು ಕಲೆಹಾಕುವ ಮೂಲಕ ಮಾಧವನ್ ಫೈನಲ್ಸ್'ಗೆ ಅರ್ಹತೆ ಪಡೆದರು. ಇದರೊಂದಿಗೆ 47 ವರ್ಷ ವಯಸ್ಸಿನ ಮಾಧವನ್ ಏ.4ರಿಂದ 6ರ ವರೆಗೆ ಪುಣೆಯಲ್ಲಿನ ಆಕ್ಸ್'ಫರ್ಡ್ ಗಾಲ್ಫ್ ರೆಸಾರ್ಟ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಗಾಲ್ಫ್ ಫೈನಲ್ಸ್'ನಲ್ಲಿ ಸ್ಪರ್ಧಿಸಲಿದ್ದಾರೆ. 'ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿದ್ದು ಸಂತಸವನ್ನುಂಟು ಮಾಡಿದೆ. ಫೈನಲನ್ನು ಎದುರು ನೋಡುತ್ತಿದ್ದೇನೆ' ಎಂದು ಮಾಧವನ್ ಪ್ರತಿಕ್ರಿಯಿಸಿದ್ದಾರೆ. ಮೊದಲ ದಿನದ ಸ್ಪರ್ಧೆಯಲ್ಲಿ ಸ್ಥಳೀಯ ಗಾಲ್ಫರ್ ರೋಹನ್ ನಿಗಮ್ 78 ಅಂಕಗಳಿಸಿ ಪ್ರಶಸ್ತಿ ಗೆದ್ದರು. ಇನ್ನುಳಿದಂತೆ ಅರ್ಜುನ್ ನೊವ್ಹಾರ್, ಚಿತ್ರೇಶ್ ವಾಸ್ಪಾಟೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.

Edited By

Suresh M

Reported By

Madhu shree

Comments