ಏಕದಿನ ಸರಣಿಗೆ ಭಾರತ ತಂಡಕ್ಕೆ ಮಿಥಾಲಿ ರಾಜ್ ಸಾರಥ್ಯ
ಮುಂಬವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮಿಥಾಲಿ ರಾಜ್ ಭಾರತ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ. ಫೆಬ್ರವರಿ 5ರಿಂದ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ 16 ಆಟಗಾರರ ತಂಡವನ್ನು ಪ್ರಕಟಿಸಿದ್ದು ಹರ್ಮನ್ ಪ್ರೀತ್ ಕೌರ್ ಅವರನ್ನು ತಂಡದ ಉಪ ನಾಯಕಿಯಾಗಿ ಘೋಷಿಸಲಾಗಿದೆ.
ಏಕದಿನ ಸರಣಿ ನಂತರ ಟಿ20 ಸರಣಿ ನಡೆಯಲಿದ್ದು ಟಿ20 ತಂಡಕ್ಕೆ ಆಟಗಾರರನ್ನು ಮುಂದಿನ ದಿನಗಳಲ್ಲಿ ಬಿಸಿಸಿಐ ಘೋಷಣೆ ಮಾಡಲಿದೆ.
ಏಕದಿನ ಮಹಿಳಾ ತಂಡ : ಮಿಥಾಲಿ ರಾಜ್(ನಾಯಕಿ), ಹರ್ಮನ್ ಪ್ರೀತ್ ಕೌರ್, ಸುಷ್ಮಾ ವರ್ಮಾ, ಏಕ್ತಾ ಬಿಸ್ತಾ, ಸ್ಮಿೃತಿ ಮಂದಾನ, ಪೂನಂ ಯಾದವ್, ಪೂನಂ ರಾವುತ್, ರಾಜೇಶ್ವರಿ ಗಾಯಕವಾಡ್, ಜೆಮಿಮಾ ರೊಡ್ರಿಗಸ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಶಿಖಾ ಪಾಂಡೆ, ಮೋನಾ ಮೆಶ್ರಂ, ಪೂಜಾ ವಸ್ತ್ರಾಕರ್, ವೇದಾ ಕೃಷ್ಣಮೂರ್ತಿ, ತಾನಿಯಾ ಭಾಟಿಯಾ.
Comments