ಯೂಸುಫ್ ಪಠಾಣ್ ರನ್ನು ಬಿಸಿಸಿಐ 5 ತಿಂಗಳು ಅಮಾನತು ಮಾಡಲು ಕಾರಣವೇನು..?

ಕಳೆದ ವರ್ಷ ಡೋಪಿಂಗ್ ಪರೀಕ್ಷೆ ವೇಳೆ ನಿಷೇಧಿತ ವಸ್ತು ಸೇವನೆ ಆರೋಪ ಪಠಾಣ್ ಮೇಲೆ ಬಂದಿದೆ. ಯೂಸುಫ್ ಪಠಾಣ್ ರನ್ನು ಐದು ತಿಂಗಳುಗಳ ಕಾಲ ತಂಡದಿಂದ ಅಮಾನತು ಮಾಡಲಾಗಿದೆ. ಇದು ಅಕ್ಟೋಬರ್ 15,2017ರಿಂದಲೇ ಈ ಅಮಾನತು ಜಾರಿಗೆ ಬರಲಿದೆ.
ಬಿಸಿಸಿಐ ನಿರ್ದೇಶನದ ಮೇಲೆ ಟೀಂ ಇಂಡಿಯಾ ಮಾಜಿ ಆಟಗಾರ ಯೂಸುಫ್ ಪಠಾಣ್ ರನ್ನು ಬರೋಡಾ ರಣಜಿ ತಂಡದಿಂದ ಅಮಾನತು ಮಾಡಲಾಗಿದೆ. ಪಠಾಣ್ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವುದೇ ಇದಕ್ಕೆ ಕಾರಣವಾಗಿದೆ.ಯೂಸುಫ್ ಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ವೇಳೆ ಬ್ರಾಜೆಟ್ ಹೆಸರಿನ ಔಷಧಿಯನ್ನು ಅವರು ಸೇವನೆ ಮಾಡಿದ್ದರು. ಅದ್ರಲ್ಲಿ ಟೆರ್ಬುಟಲೈನ್ ಹೆಸರಿನ ಪದಾರ್ಥವಿರುತ್ತದೆ. ಟೆರ್ಬುಟಲೈನ್ ನಿಷೇಧಿತ ರಾಸಾಯನಿಕ ವಸ್ತುವಾಗಿದೆ.
ಆಟಗಾರರು ಯಾವುದೇ ಔಷಧಿ ಸೇವನೆಗೂ ಮುನ್ನ ಪಠಾಣ್ ಮಾಹಿತಿ ನೀಡಬೇಕಾಗುತ್ತದೆ. ಆದ್ರೆ ಯೂಸುಫ್ ಯಾವುದೇ ಮಾಹಿತಿ ನೀಡಿರಲಿಲ್ಲ. ಜೊತೆಗೆ ತಂಡದ ವೈದ್ಯರ ಅನುಮತಿಯನ್ನೂ ಪಡೆದಿರಲಿಲ್ಲ. ಹಾಗಾಗಿ ಅವರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಅಕ್ಟೋಬರ್ 15,2017ರಿಂದಲೇ ಬಿಸಿಸಿಐ ನಿಷೇಧ ಹೇರಿದ್ದು,ಜನವರಿ 14,2018ರಂದು ಯೂಸುಫ್ ಅಮಾನತು ಶಿಕ್ಷೆ ಪೂರ್ಣವಾಗಲಿದೆ.
Comments