ಫುಲ್ ಎಂಜಾಯ್ ಮೂಡ್ ನಲ್ಲಿ ವಿರುಷ್ಕಾ ದಂಪತಿ

ಡಿಸೆಂಬರ್ 11 ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಇಟಲಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಸದ್ಯ ಪತಿಯೊಂದಿಗೆ ದಕ್ಷಿಣ ಅಫ್ರಿಕಾದ ಕೇಪ್ ಟೌನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಫುಲ್ ಎಂಜಾಯ್ ಮೂಡ್ ನಲ್ಲಿರುವ ವಿರುಷ್ಕಾ ದಂಪತಿ, ತಮ್ಮ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಇವುಗಳನ್ನು ಶೇರ್ ಮಾಡುತ್ತಿದ್ದಾರೆ.
ವಿವಾಹದ ಬಳಿಕ ಹನಿಮೂನ್ ಗೆ ಫಿನ್ ಲ್ಯಾಂಡ್ ಗೆ ತೆರಳಿದ್ದ ವಿರುಷ್ಕಾ ದಂಪತಿ, ಅಲ್ಲಿಂದ ಮರಳಿದ ಬಳಿಕ ಡಿಸೆಂಬರ್ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ಅತ್ಮೀಯರಿಗೆ ಅದ್ದೂರಿ ಪಾರ್ಟಿ ನೀಡಿದ್ದರು. ಈಗ ಕೇಪ್ ಟೌನ್ ಗೆ ತೆರಳಿರುವ ವಿರುಷ್ಕಾ ಅಲ್ಲಿ ಅಕ್ಷಯ್ ಕುಮಾರ್ ಜೊತೆ ಲಂಚ್ ಮಾಡಿದ್ದು, ಈ ಫೋಟೋ ಸೆರೆ ಹಿಡಿದಿದ್ದ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಮಧ್ಯೆ ಕೇಪ್ ಟೌನ್ ಬೀದಿಯಲ್ಲಿ ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ ಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಅನುಷ್ಕಾ ಶರ್ಮಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಹರಿದಾಡುತ್ತಿದ್ದು, ವೈರಲ್ ಆಗಿದೆ.
Comments