ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಎಫ್ ಐಆರ್ ದಾಖಲು

30 Dec 2017 1:49 PM | Sports
630 Report

ಕುಸ್ತಿಪಟು ಪ್ರವೀಣ್ ರಾಣಾ ಅವರ ಬೆಂಬಲಿಗರ ಜತೆ ಸಂಘರ್ಷದ ಆರೋಪದ ಮೇಲೆ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಐವರು ಬೆಂಬಲಿಗರ ವಿರುದ್ಧ ದೆಹಲಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನ್ನು ದಾಖಲಿಸಲಾಗಿದೆ.

ಸುಶೀಲ್ ಕುಮಾರ್ ಅವರ ಬೆಂಬಲಿಗರು ಪ್ರವೀಣ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಲ್ಲೆ ಮಾಡಿದ ಘಟನೆ ಸಂಬಂಧವಾಗಿ ದಿಲ್ಲಿ ಪೊಲೀಸರು ಐಪಿಸಿ ಸೆ.323 ಮತ್ತು 341ರ ಪ್ರಕಾರ ಕೇಸು ದಾಖಲಿಸಿಕೊಂಡದರು. ಎರಡು ಒಲಿಂಪಿಕ್ ಮೆಡಲ್ ವಿಜೇತ ಸುಶೀಲ್ ಅವರು ಮುಂದಿನ ವರ್ಷದ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತೆ ಪಡೆದ ಕುಸ್ತಿ ಪಂದ್ಯವು, ಸುಶೀಲ್ ಕುಮಾರ್ ಮತ್ತು ಎದುರಾಳಿ ಪ್ರವೀಣ್ ರಾಣಾ ಅವರ ಬೆಂಬಲಿಗರ ನಡುವೆ ವಸ್ತುತಃ ಕಾಳಗವನ್ನೇ ಕಂಡಿತು. ಕಾಮನ್ವೆಲ್ತ್ ಚಾಂಪ್ಯನ್ಶಿಪ್ ಚಿನ್ನದ ಪದಕವನ್ನು ಗೆದ್ದು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಅಖಾಡೆಗೆ ಮರಳಿರುವ ಸುಶೀಲ್ ಕುಮಾರ್ 74 ಕೆಜಿ ವಿಭಾಗದಲ್ಲಿನ ಎಲ್ಲ ಸವಾಲುಗಳನ್ನು ಗೆದ್ದರು. ಸುಶೀಲ್ ಎದುರಿನ ಸೆಮಿ ಫೈನಲ್ ಪಂದ್ಯವನ್ನು ಎದುರಾಳಿ ಪ್ರವೀಣ್ ರಾಣಾ ಸೋತಾಗ ಅವರ ಅಭಿಮಾನಿ ಬೆಂಬಲಿಗರು ಸಂಯಮವನ್ನು ಕಳೆದುಕೊಂಡು ಸುಶೀಲ್ ಅಭಿಮಾನಿಗಳ ಮೇಲೇರಿ ಹೋದರು ಎಂದು ವರದಿಯಾಗಿದೆ.

Edited By

Suresh M

Reported By

Madhu shree

Comments