ಬ್ಯಾಟ್ ಮೇಲಿನ ಸ್ಟಿಕರ್ ಗೆ ಕೊಹ್ಲಿ ಎಷ್ಟು ಹಣ ಪಡೀತಾರೆ ಗೊತ್ತಾ...!!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಜಾಹೀರಾತು ಕ್ಷೇತ್ರದಲ್ಲೂ ನಾಯಕ. ಅನೇಕ ಬ್ರ್ಯಾಂಡ್ ಕಂಪನಿಗಳ ಜಾಹೀರಾತಿನಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟ್ ಮೇಲೆ ಕಂಪನಿಯೊಂದರ ಸ್ಟಿಕರ್ ಅಂಟಿಸಿಕೊಳ್ಳೊದು ಕೂಡ ಒಂದು ಜಾಹೀರಾತಿನ ವಿಧ.
ಬ್ಯಾಟ್ ಮೇಲೆ ಸ್ಟಿಕರ್ ಅಂಟಿಸಿಕೊಳ್ಳುವ ಬಗ್ಗೆ ಕಂಪನಿ ಹಾಗೂ ಆಟಗಾರರ ನಡುವೆ ಒಪ್ಪಂದ ನಡೆಯುತ್ತದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟ್ ಮೇಲೆ ಎಂಆರ್ ಎಫ್ ಸ್ಟಿಕರ್ ಇರ್ತಿತ್ತು. ಆಗವರು ಅದ್ರ ರಾಯಭಾರಿಯಾಗಿದ್ದರು. ಈಗ ಕೊಹ್ಲಿ ಬ್ಯಾಟ್ ಮೇಲೆ ಎಂಆರ್ ಎಫ್ ಸ್ಟಿಕರ್ ನೋಡಬಹುದಾಗಿದೆ. ಎಂಆರ್ ಎಫ್ ಬ್ರ್ಯಾಂಡ್ ರಾಯಭಾರಿಯಾಗಿರುವ ಕೊಹ್ಲಿ 8 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಕೊಹ್ಲಿ 100 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದಾರೆ.
ಕೊಹ್ಲಿಯೊಂದೇ ಅಲ್ಲ ಮಾಜಿ ನಾಯಕ ಎಂ.ಎಸ್.ಧೋನಿ, ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಕೂಡ ದೊಡ್ಡ ಮೊತ್ತವನ್ನು ಸ್ಟಿಕರ್ ಮೂಲಕ ಗಳಿಸ್ತಾರೆ. ಧೋನಿ ಪ್ರತಿ ವರ್ಷ ಸ್ಟಿಕರ್ ನಿಂದ 6 ಕೋಟಿ ಗಳಿಸ್ತಾರೆ. ಇನ್ನು ಗೇಲ್ ಪ್ರತಿ ವರ್ಷ 3 ಕೋಟಿ ಗಳಿಸ್ತಾರೆ. ರೋಹಿತ್ ಶರ್ಮಾ ಕೂಡ ಬ್ಯಾಟ್ ಗೆ ಸ್ಟಿಕರ್ ಅಂಟಿಸಿಕೊಳ್ಳಲು 3 ಕೋಟಿ ಪಡೆಯುತ್ತಾರೆ.
Comments