ರ‍್ಯಾಪಿಡ್ ಚೆಸ್ ಚಾಂಪಿಯನ್ಶಿಪ್ ಕಿರೀಟ ಮುಡಿಗೇರಿಸಿಕೊಂಡ ವಿಶ್ವನಾಥ್ ಆನಂದ್

ಭಾರತದ ಹೆಮ್ಮೆಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಮತ್ತೆ ಅಗ್ರ ಪಟ್ಟಕ್ಕೇರಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಚೆಸ್ ನ ಕಿಂಗ್ ತಾನೆಂದು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ.ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಮಣಿಸಿದ ಆನಂದ್ ಬಹುದಿನಗಳ ನಂತರ ಮತ್ತೆ ಗೆಲುವಿನ ಹಾದಿಗೆ ಮರಳಿದ್ದಾರೆ.
"ರ‍್ಯಾಪಿಡ್ ಚೆಸ್ನಲ್ಲಿ ಪಾರಮ್ಯ ಸಾಧಿಸಿರುವ ಕಾರ್ಲ್ಸನ್ ವಿರುದ್ಧ ಜಯ ಸಾಧಿಸಿರುವುದು ಸಂತಸ ತಂದಿದೆ. ಈ ಗೆಲುವು ನಿರ್ಣಾಯಕವಾದದ್ದು. ಕಠಿಣ ವರ್ಷದ ಬಳಿಕ ನಾನು ಈ ಪಂದ್ಯಾವಳಿಗೆ ಆಗಮಿಸಿದ್ದು ಲಂದನ್ ನ ಅನುಭವ ನನಗೆ ನಿರಾಶೆ ಉಂಟುಮಾಡಿತ್ತು. ಹಾಗಾಗಿ ಬಹುತೇಕ ಯಾವ ಆಶಾಭಾವನೆಗಳನ್ನಿರಿಸಿಕೊಂಡಿರಲಿಲ್ಲ.ಆದರೆ ಮತ್ತೆ ಜಯಗಳಿಅಸಿ ವಿಶ್ವ ಚಾಂಪಿಯನ್ ಆಗಿರುವುದು ನಿಜಕ್ಕೂ ಸಂತಸ, ಇದನ್ನು ಮಾತಿನಲ್ಲಝೇಳಲು ಸಾದ್ಯವಿಲ್ಲ" ಆನಂದ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ 2013ನೇ ಸಾಲಿನಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಕಾರ್ಲ್ಸನ್ ವಿರುದ್ಧ ಸೋಲನುಭವಿಸಿದ್ದ ಆನಂದ್ ಇಂದಿನ ಜಯದೊಡನೆ ಸೇಡು ತೀರಿಸಿಕೊಂಡಿದ್ದಾರೆ.
Comments