ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ಸ್ಕಿಲ್ ಹೇಳಿಕೊಟ್ಟ ಧೋನಿ !

ಹೌದು... ಧೋನಿ ಶ್ರೀಲಂಕಾ ವಿರುದ್ಧದ ಕೊನೆಯ ಟಿ-20 ಪಂದ್ಯದ ಬಳಿಕ ಲಂಕಾ ಯುವ ಕ್ರಿಕೆಟಿಗರಿಗೆ ಕೆಲವು ಬ್ಯಾಟಿಂಗ್ ಸ್ಕಿಲ್ ಟಿಪ್ಸ್ ಹೇಳಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ನಡೆದ ಮೂರನೇ ಟಿ-20 ಪಂದ್ಯದ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಲ್ಲಿನ ಆಟಗಾರರಿಗೆ ಬ್ಯಾಟಿಂಗ್ ಸ್ಕಿಲ್ ಹೇಳಿಕೊಟ್ಟಿದ್ದಾರೆ.
ಲಂಕಾ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಹಾಗೂ ಯುವ ಕ್ರಿಕೆಟಿಗರಾದ ಅಕಿಲಾ ಧನಂಜಯ ಮತ್ತು ಸದೀರಾ ಸಮರವಿಕ್ರಮ ಅವರಿಗೆ ಕೆಲವು ಉಪಯುಕ್ತ ಬ್ಯಾಟಿಂಗ್ ಕೌಶಲ್ಯ ಹೇಳಿಕೊಡುತ್ತಿರುವ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಮೂರನೇ ಟಿ-20 ಪಂದ್ಯ ಮುಕ್ತಾಯವಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಂಜಯ್ ಮಂಜ್ರೇಕರ್ ಅವರೊಟ್ಟಿಗೆ ಲಂಕಾ ನಾಯಕ ತಿಸಾರ ಪೆರೇರಾ ಮಾತನಾಡುತ್ತಿದ್ದ ವೇಳೆ ಯುವ ಆಟಗಾರರು ಧೋನಿ ಬಳಿ ಬ್ಯಾಟಿಂಗ್ ಸಲಹೆಯನ್ನು ಶ್ರದ್ಧೆಯಿಂದ ಕೇಳುತ್ತಿದ್ದರು.
Comments