ರೋಹಿತ್ ಶರ್ಮ ತಮ್ಮ ಪತ್ನಿಗೆ ವಿಭಿನ್ನವಾಗಿ ಬರ್ತ್ ಡೇ ವಿಶ್ ಮಾಡಿದ್ದಾರೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನಕ್ಕೇರಿರುವ ರೋಹಿತ್ ಶರ್ಮಾ ವಿಭಿನ್ನ ಶೈಲಿಯಲ್ಲಿ ತಮ್ಮ ಪತ್ನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿಗೆ ಹುಟ್ಟುಹಬ್ಬದ ಶುಭ ಕೋರಿರುವ ರೋಹಿತ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಮ್ಮ ಆಪ್ತರ ಹುಟ್ಟುಹಬ್ಬದಲ್ಲಿ ಅವ್ರ ಜೊತೆಗಿರಲು ನಾವು ಬಯಸುತ್ತೇವೆ. ಆದ್ರೆ ನನ್ನ ಪತ್ನಿ ಜೊತೆ ಇದು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿರುವ ಶರ್ಮಾ ಕೊನೆಯಲ್ಲಿ ಇಂಥ ಪತ್ನಿ ಪಡೆದ ನಾನು ಅದೃಷ್ಟವಂತ ಎಂದಿದ್ದಾರೆ. ಇಷ್ಟೇ ಅಲ್ಲ ಪತ್ನಿ ಜೊತೆಗಿರುವ ಫೋಟೋವೊಂದನ್ನು ಹಾಕಿರುವ ರೋಹಿತ್, ಫೋಟೋದಲ್ಲಿರುವಂತೆ ಸದಾ ಖುಷಿಯಾಗಿರುವ ನನ್ನ ಲವ್ ಎಂದು ಪತ್ನಿಗೆ ಶುಭಕೋರಿದ್ದಾರೆ.
ರೋಹಿತ್ ಶರ್ಮಾ ಟ್ವೀಟರ್ ಹಾಗೂ ಇನ್ಸ್ಟ್ರಾಗ್ರಾಮ್ ಎರಡರಲ್ಲೂ ಪತ್ನಿಗೆ ಶುಭಾಷಯ ಹೇಳಿದ್ದಾರೆ. ರೋಹಿತ್ ಶರ್ಮಾ ಪತ್ನಿ ಬರ್ತ್ ಡೇ ಡಿಸೆಂಬರ್ 20ರಂದು. ಈ ದಿನ ರೋಹಿತ್ ಶ್ರೀಲಂಕಾ ವಿರುದ್ಧ ನಡೆದ ಪಂದ್ಯಕ್ಕಾಗಿ ಮೈದಾನದಲ್ಲಿದ್ದರು. ಹಾಗಾಗಿ ಪತ್ನಿ ಜೊತೆ ಕಾಲ ಕಳೆಯಲು ಸಾಧ್ಯವಾಗಲಿಲ್ಲ.
Comments