ನಾನೇ ಬೇರೆ, ಕೊಹ್ಲಿಯೇ ಬೇರೆ ಎಂದ ಪಾಕ್ ಕ್ರಿಕೆಟಿಗ

ತಮ್ಮನ್ನು ಕೊಹ್ಲಿಗೆ ಹೋಲಿಸಿರೋ ಕೋಚ್ ಗೆ ಅಜಮ್ ಸರಿಯಾದ ತಿರುಗೇಟು ಕೊಟ್ಟಿದ್ದಾರೆ. ಕೊಹ್ಲಿ ವಿಶ್ವದ ನಂಬರ್ ಒನ್ ಆಟಗಾರ. ನಾನೇ ಬೇರೆ, ಕೊಹ್ಲಿಯೇ ಬೇರೆ. ನಮ್ಮಿಬ್ಬರಿಗೂ ಹೋಲಿಸುವುದರಲ್ಲಿ ಅರ್ಥವಿಲ್ಲ. ಪಾಕಿಸ್ತಾನ ತಂಡಕ್ಕಾಗಿ ಚೆನ್ನಾಗಿ ಆಡಬೇಕು ಅನ್ನೋದಷ್ಟೇ ನನ್ನ ಉದ್ದೇಶ ಅಂತಾ ಸ್ಪಷ್ಟಪಡಿಸಿದ್ದಾರೆ.
ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಎಲ್ಲರಿಗೂ ಈಗ ಕೊಹ್ಲಿಯಂತೆ ಆಡಬೇಕು ಅನ್ನೋ ಆಸೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ಎಲ್ಲರೂ ಕೊಹ್ಲಿಗೆ ಹೋಲಿಸ್ತಾರೆ. ಈ ಬಾರಿ ಪಾಕಿಸ್ತಾನ ತಂಡದ ತರಬೇತುದಾರ ಮಿಕ್ಕಿ ಆರ್ಥರ್ ಈ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಎಬಿ ಡಿವಿಲಿಯರ್ಸ್, ಅವರ ಫೇವರಿಟ್ ಬ್ಯಾಟ್ಸ್ ಮನ್ ಆಗಿದ್ದರಂತೆ. ಎಬಿಡಿಯಂತೆಯೇ ಆಡಬೇಕೆಂದು ಅವರ ಶಾಟ್ಸ್ ಅನ್ನು ಅಜಮ್ ಟ್ರೈ ಮಾಡುತ್ತಿದ್ರು. ಈಗ ಕೊಹ್ಲಿಯನ್ನು ಫಾಲೋ ಮಾಡುತ್ತೇನೆ ಅಂತಾ ನೇರವಾಗಿಯೇ ಹೇಳಿದ್ದಾರೆ. 36 ಏಕದಿನ ಪಂದ್ಯಗಳನ್ನಾಡಿರೋ ಅಜಂ 1758 ರನ್ ಗಳಿಸಿದ್ದಾರೆ.
Comments