ಅಭಿಮಾನಿಯ ಪ್ರಶ್ನೆಗೆ ಸಾನಿಯಾರ ಉತ್ತರವೇನು ಗೊತ್ತಾ..?
ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಸಿಕ್ಕಾಪಟ್ಟೆ ಫ್ಯಾನ್ಸ್ಗಳಿದ್ದಾರೆ ಅನ್ನೋದು ಗೊತ್ತೇ ಇದೆ. ಹಾಗೆಯೇ ಸಾನಿಯಾಗೂ ಕೆಲವು ಫೇವರಿಟ್ ವ್ಯಕ್ತಿಗಳಿದ್ದಾರೆ ಅನ್ನೋದು ನಿಮಗೆ ಗೊತ್ತಾ? ಸಾನಿಯಾ ಮಿರ್ಜಾ ತನ್ನ ಫ್ಯಾನ್ಸ್ ಜೊತೆ ಟ್ವಿಟರ್ನಲ್ಲಿ ಮಾತುಕತೆ ನಡೆಸಿದ್ದಾರೆ. ಗಂಟೆಗಟ್ಟಲೆ ಕೂಲ್ ಆಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅದರಲ್ಲಿ ಒಬ್ಬ ಅಭಿಮಾನಿ ಸಾನಿಯಾರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್ ಯಾರು ಎಂದು ಕೇಳಿದ್ದಾರೆ. ಸಾಮಾನ್ಯವಾಗಿ ಹೆಚ್ಚಿನವರು ಮಹೇಂದ್ರ ಸಿಂಗ್ ಧೋನಿ ಅಥವಾ ವಿರಾಟ್ ಕೊಹ್ಲಿ ಎನ್ನುತ್ತಾರೆ. ಆದರೆ ಸಾನಿಯಾಗೆ ಇವರಿಬ್ಬರೂ ಫೇವರಿಟ್ ಅಲ್ಲವಂತೆ ಬದಲಾಗಿ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತೆ. ಅಭಿಮಾನಿ ಕೂಡಾ ತುಂಬಾ ಜಾಣ್ಮೆಯ ಪ್ರಶ್ನೆಯನ್ನೇ ಕೇಳಿದ್ದಾರೆ. ಸಾನಿಯಾ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಕೇಳಿದಾಗ ಎಲ್ಲಿ ತನ್ನ ಪತಿ ಶೋಹೆಬ್ ಮಲ್ಲಿಕ್ರನ್ನು ಹೇಳುತ್ತಾರೋ ನೋಡೋಣ ಎಂದು ಈ ಪ್ರಶ್ನೆ ಕೇಳಿರಬೇಕೆನಿಸುತ್ತದೆ.
Comments