3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

410 ರನ್ ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ 5 ವಿಕೆಟ್ ನಷ್ಟಕ್ಕೆ 299 ರನ್ ಗಳನ್ನು ಮಾಡಿತ್ತು. ಇನ್ನು ದಿನದಾಟ ಮುಗಿಯುವ ಕೆಲವೇ ಹೊತ್ತಿಗೂ ಮುಂಚೆ ಎರಡೂ ತಂಡದ ನಾಯಕರು ಪoದ್ಯ ಡ್ರಾ ನಿರ್ಧಾರಕ್ಕೆ ಒಪ್ಪಿಕೊಂಡರು.
ಕುತೂಹಲಭರಿತ ಕೊನೆಯ ದಿನದಾಟದಲ್ಲಿ ಲಂಕಾದ ಆಲ್ ರೌಡರ್ ಡಿಸಿಲ್ವಾ ಅವರ ಸಮಯೋಚಿತ ಆಟದ ನೆರವಿನಿಂದ ಚಂಡಿಮಾಲ್ ಪಡೆ ಸೋಲನ್ನು ತಪ್ಪಿಸಿಕೊಂಡಿದೆ. ಆದರೂ ಲಂಕನ್ನರ ಅದ್ಭುತವಾದ ಹೋರಾಟ ಎಲ್ಲರನ್ನು ಚಕಿತಗೊಳಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ರನ್ ಹೋಲ್ ಹಾರಿಸಿದ್ದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇದರ ಜೊತೆಗೆ 1-0 ಅಂತರದಿಂದ ಲಂಕಾವನ್ನು ಮಣಿಸಿ ಸರಣಿಯನ್ನು ಕೂಡ ವಶಕ್ಕೆ ಪಡೆಯುವ ಮೂಲಕ ಕೊಹ್ಲಿ ತಂಡದ ನಾಯಕನಾಗಿ ಮತ್ತೊಂದು ದಾಖಲೆ ಮಾಡಿದ್ದಾರೆ .
Comments