ಭಾರತೀಯ ಸೇನೆ ಕುರಿತಂತೆ ಸೆಹ್ವಾಗ್ ಮಾಡಿರುವ ಟ್ವೀಟ್ ವೈರಲ್
ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇದೇ ಜನವರಿಯಿಂದ ಒಟ್ಟಾರೆ 200ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸೆಹ್ವಾಗ್ "200 ಉಗ್ರರನ್ನು ಕೊಲ್ಲುವ ಮೂಲಕ ದ್ವಿಶತಕ ಬಾರಿಸಿದ್ದೀರಿ ಧನ್ಯವಾದಗಳು...ಜೈ ಹಿಂದ್" ಎಂದು ಬರೆದಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಗಳು ಹೆಚ್ಚು ಮನ್ನಣೆ ಪಡೆಯುತ್ತವೆ. ಅಂತೆ ಭಾರತೀಯ ಸೇನೆ ಕುರಿತಂತೆ ಸೆಹ್ವಾಗ್ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದೆ. ಸೆಹ್ವಾಗ್ ರ ಈ ಟ್ವೀಟ್ ಗೆ ಸಾಕಷ್ಟು ಟ್ವಿಟರಿಗರು ಖುಷಿ ವ್ಯಕ್ತಪಡಿಸುತ್ತಾ ರೀ ಟ್ವೀಟ್ ಗಳನ್ನು ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಲೈಕ್ ಮಾಡಿದ್ದಾರೆ.
Comments