ಪಾಂಡ್ಯ ಬಿಚ್ಚಿಟ್ರು ಕಠಿಣ ದಿನಗಳ ಸತ್ಯ
2015ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡುವ ಮೊದಲು ಹಾರ್ದಿಕ್ ರ ಹಣಕಾಸಿನ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲವಂತೆ. 2 ವರ್ಷದ ವರೆಗೆ ಕಾರಿನ ಇಎಮ್ಐ ಕಟ್ಟಿರಲಿಲ್ಲವಂತೆ. ಕಾರನ್ನು ಎಲ್ಲಿ ಕೊಂಡೊಯ್ಯುತ್ತಾರೋ ಎನ್ನುವ ಭಯದಿಂದ ಕಾರನ್ನು ಅಡಗಿಸಿ ಇಡುತ್ತಿದ್ದರಂತೆ.ಕಾರಿನ ಇಎಮ್ಐ ಕಟ್ಟೋದಕ್ಕೋಸ್ಕರ ಹಣವನ್ನು ಉಳಿತಾಯ ಮಾಡುತ್ತಿದ್ದರಂತೆ. ಮೂರು ವರ್ಷಗಳ ಕಾಲ ಕಷ್ಟಪಟ್ಟಿದ್ದೇನೆ.
5, 10 ರೂಪಾಯಿಯನ್ನೂ ಉಳಿತಾಯ ಮಾಡುತ್ತಿದ್ದೆ. ಐಪಿಎಲ್ ಮ್ಯಾಚ್ನಲ್ಲಿ ಸುಮಾರು 70 ಸಾವಿರ ರೂ. ದೊರಕಿತ್ತು. ಈ ಹಣದಿಂದ ಇನ್ನೂ ಸ್ವಲ್ಪ ದಿನ ಆರಾಮವಾಗಿರಬಹುದು ಅಂದುಕೊಂಡಿದ್ದೆ. ಆ ದಿನಗಳಲ್ಲಿ ಕಾರಿನ ಇಎಮ್ಐ ಹಾಗೂ ಹೊಟ್ಟೆಗೆ ಆಹಾರ ಇದೇ ಮುಖ್ಯವಾಗಿತ್ತು ಎನ್ನುವುದನ್ನು ನೆನಪಿಸಿಕೊಂಡರು ಹಾರ್ದಿಕ್. ಆದರೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ ಟೀಮ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಅದೃಷ್ಟವೇ ಬದಲಾಯಿತು. ಹಾರ್ದಿಕ್ಗೆ 50 ಲಕ್ಷದ ಚೆಕ್ ಸಿಕ್ಕಿತ್ತು. ಜೊತೆಗೆ ಒಂದು ಕಾರು ಕೂಡಾ ಸಿಕ್ಕಿತ್ತು. ಹಾರ್ದಿಕ್ ಲೈಫ್ ಮೂರೇ ಮೂರು ತಿಂಗಳಲ್ಲಿ ಬದಲಾಯಿತು. ಮೂರು ತಿಂಗಳಲ್ಲಿ 50-60 ಲಕ್ಷ ದುಡ್ಡು ತನ್ನ ಕೈಯಲ್ಲಿತ್ತು ಎಂದು ಹಾರ್ದಿಕ್ ತನ್ನ ಹಳೇ ದಿನಗಳನ್ನು ಮೆಲುಕು ಹಾಕಿದರು.
Comments