ಪೊಲ್ಲಾರ್ಡ್ ಪೊಲೀಸರಿಗೆ ಕರೆ ಮಾಡಿ ಪಾಂಡ್ಯರನ್ನು ಬಂಧಿಸುವಂತೆ ಹೇಳಿದ್ದೇಕೆ ?

ಒಂದು ದಿನ ಪೊಲ್ಲಾರ್ಡ್ ನನ್ನನ್ನು ಶಾಂತವಾಗಿರುವಂತೆ ಹೇಳಿದ್ದರು. ಅದಕ್ಕೆ ನಾನು ನೀವು ನನ್ನ ಜತೆಗಿರುವಾಗ ನನಗೇನು ಆಗುವುದಿಲ್ಲ ಎಂದು ಹೇಳಿದ್ದೆ ನಾನು ನಿಮ್ಮ ಊರಿನಲ್ಲಿದ್ದಿನಿ ಅಂದೆ. ನಾನು ಹೊರಗೆ ಹೋಗಬೇಕು ಎಂದು ಕಾಲು ಹೊರಗಿಟ್ಟೆ. ಆಗ ಪೊಲ್ಲಾರ್ಡ್ ತನ್ನ ಆಪ್ತ ಸ್ನೇಹಿತ ಪೊಲೀಸರೊಬ್ಬರಿಗೆ ಕರೆ ಮಾಡಿ ನನ್ನನ್ನು ಬಂಧಿಸುವಂತೆ ಹೇಳಿದ್ದರು.
ಆಗ ಪೊಲ್ಲಾರ್ಡ್ ತನ್ನ ಆಪ್ತ ಸ್ನೇಹಿತ ಪೊಲೀಸರೊಬ್ಬರಿಗೆ ಕರೆ ಮಾಡಿ ನನ್ನನ್ನು ಬಂಧಿಸುವಂತೆ ಹೇಳಿದ್ದರು. ನಾನು ಹೊರಗೆ ಹೋದಾಗ ಪೊಲೀಸ್ ಒಬ್ಬರು ಬಂದರು ಮೊದಲಿಗೆ ನಾನು ಅದು ತಮಾಷೆ ಎಂದು ಭಾವಿಸಿದೆ ಆದರೆ ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನಾನು ಶಾಂತವಾಗಿ ಇದ್ದೇ. ನಾನು ಯಾವುದೇ ತಪ್ಪು ಮಾಡಿರಲಿಲ್ಲ ಹೀಗಾಗಿ ನಾನು ನನ್ನ ತಂಡವನ್ನು ಸಂಪರ್ಕಿಸುವುದು ಉಚಿತ ಎಂದು ಭಾವಿಸಿದೆ. ಅಷ್ಟರಲ್ಲಿ ಇದು ತಮಾಷೆಗಾಗಿ ಎಂದು ನನಗೆ ತಿಳಿಯಿತು. ಕಾರಣ ಪೊಲೀಸ್ ತಮ್ಮ ಮೊಬೈಲ್ ನಿಂದ ಯಾರಿಗೋ ಕರೆ ಮಾಡಲು ಮುಂದಾಗಿದ್ದರು. ಆದರೆ ಅವರು ತಮ್ಮ ಮೊಬೈಲ್ ಅನ್ನು ಉಲ್ಟಾ ಹಿಡಿದುಕೊಂಡಿದ್ದನ್ನು ನೋಡಿ ನನಗೆ ಇದು ತಮಾಷೆ ಎಂದು ಗೊತ್ತಾಯಿತು. ಹೀಗೆ ಅಂದು ಪೊಲ್ಲಾರ್ಡ್ ತಮ್ಮ ವಿಷಯವಾಗಿ ತಮಾಷೆ ಮಾಡಿದ್ದನ್ನು ನೆನಪಿಸಿಕೊಂಡ ಅವರು ನಿಜಕ್ಕೂ ಪೊಲ್ಲಾರ್ಡ್ ನನ್ನ ಸಹೋದರ ಎಂದು ಹೇಳಿಕೊಂಡಿದ್ದಾರೆ.
Comments