ಹಾರ್ದಿಕ್ ಪಾಂಡ್ಯ ಸಿಕ್ಸ್ ಪ್ಯಾಕ್ ನೋಡಿ..!!
ನವ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಿರುವ ಪಾಂಡ್ಯ ಇದೀಗ ದೇಹಸಿರಿಯತ್ತ ಗಮನ ಕೇಂದ್ರಿಕರಿಸಿದ್ದು, ಹಾರ್ದಿಕ್ ಪಾಂಡ್ಯ ಮ್ಯಾಕ್ಸಿಮ್ ಬ್ರಾಂಡ್ ಶೂಟಿಂಗ್ ವೇಳೆ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಿದ್ದಾರೆ. ಜತೆಗೆ ಅದರ ಫೋಟೋ ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.
ಸದ್ಯ ಟೀಂ ಇಂಡಿಯಾದಿಂದ ದೂರವಾಗಿರುವ ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ 25 ಟಿ -20, 30 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಂಡ್ಯ, ವೃತ್ತಿ ಜೀವನದಲ್ಲಿ ಅಲ್ಪಾವಧಿಯಲ್ಲಿ ಕ್ರಿಕೆಟ್ ಆಡಿದ್ದೇನೆ. ಆಲ್ ರೌಂಡರ್ ಆಗಿರುವ ಕಾರಣ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
Comments