ಎರಡನೇ ಟೆಸ್ಟ್: 205 ರನ್ ಗೆ ಆಲ್ ಔಟ್ ಆದ ಲಂಕಾ ಪಡೆ

24 Nov 2017 5:32 PM | Sports
478 Report

ಭಾರತದ ಅವಳಿ ಸ್ಪಿನ್ನರ್ ಗಳಾದ ಆರ್.ಅಶ್ವಿನ್(4-67) ಹಾಗೂ ರವೀಂದ್ರ ಜಡೇಜ(3-56), ವೇಗದ ಬೌಲರ್ ಇಶಾಂತ್ ಶರ್ಮ(3-37)ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ ಇಲ್ಲಿ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗಿದೆ.

ಮೊದಲ ಇನಿಂಗ್ಸ್ನಲ್ಲಿ 79.1 ಓವರ್ಗಳಲ್ಲಿ 205 ರನ್ಗಳಿಗೆ ಆಲೌಟಾಯಿತು. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಶ್ರೀಲಂಕಾದ ಪರ ಆರಂಭಿಕ ಆಟಗಾರ ಡಿ.ಕರುಣರತ್ನೆ(51) ಹಾಗೂ ನಾಯಕ ದಿನೇಶ್ ಚಾಂಡಿಮಾಲ್(57) ಅರ್ಧಶತಕ ಸಿಡಿಸಿದರೆ, ಉಳಿದವರು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಶ್ರೀಲಂಕಾ 4.5ನೇ ಓವರ್ನಲ್ಲಿ ಆರಂಭಿಕ ಆಟಗಾರ ಸಮರವಿಕ್ರಮರ ವಿಕೆಟ್ ಕಳೆದುಕೊಂಡಿತು. ತಂಡಕ್ಕೆ ದೀರ್ಘ ಸಮಯದ ಬಳಿಕ ವಾಪಸಾದ ಇಶಾಂತ್ ಶರ್ಮ ಭಾರತದ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಆ ನಂತರ ಸ್ಪಿನ್ನರ್ ಗಳಾದ ಆರ್.ಅಶ್ವಿನ್ ಹಾಗೂ ಜಡೇಜ ಶ್ರೀಲಂಕಾದ ಬ್ಯಾಟ್ಸ್ಮನ್ಗಳನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡಲಿಲ್ಲ.

Edited By

Hema Latha

Reported By

Madhu shree

Comments