ಅಪ್ಪನಂತೆ ಚಿಕ್ಕವಯಸ್ಸಿನಲ್ಲೆ ಬ್ಯಾಟ್ ಹಿಡಿದು ಅಚ್ಚರಿ ಮೂಡಿಸುತ್ತಿರುವ ಅರ್ಜುನ್
ಹೌದು, ನಾವು ಹೇಳುತ್ತಿರುವುದು ಅರ್ಜುನ್ ತೆಂಡುಲ್ಕರ್ ಬಗ್ಗೆ, ಈತ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಏಕೈಕ ಪುತ್ರ. ಅಪ್ಪನ ಆಟವನ್ನ ನೋಡುತ್ತಲೇ ಬೆಳೆದ ಅರ್ಜುನ್ ಅಪ್ಪನ ಹಾದಿಯಲ್ಲೇ ಮುನ್ನುಗ್ಗುತ್ತಿದ್ದಾರೆ.
ಮುಂಬೈ ಅಂಗಳದಲ್ಲಿ ಬೆವರು ಹರಿಸಿ, ಅಪ್ಪನಂತೆ ಆಗಬೇಕು ಎನ್ನುವ ಮಹದಾಸೆ ಇಟ್ಟುಕೊಂಡಿರುವ ಅರ್ಜುನ್ ತೆಂಡುಲ್ಕರ್, ದೇಶಿ ಟೂರ್ನಿಯಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಕೂಚ್ ಬೆಹಾರ್ ಅಂಡರ್ 19 ಟೂರ್ನಿಯಲ್ಲಿ ಅರ್ಜುನ್ ಅಮೋಘವಾಗಿ ಬೌಲಿಂಗ್ ಮಾಡುವ ಮೂಲಕ ಅಪ್ಪನಂತೆ ಟೀಂ ಇಂಡಿಯಾದಲ್ಲಿ ಮಿಂಚುವ ಇರಾದೆಯಲ್ಲಿದ್ದಾರೆ. ಕೂಚ್ ಬೆಹಾರ್ ಟೂರ್ನಿಯಲ್ಲಿ ಮಧ್ಯ ಪ್ರದೇಶದ ವಿರುದ್ಧ ಅರ್ಜುನ್ ತೆಂಡುಲ್ಕರ್ ಮಸ್ತ್ ಬೌಲಿಂಗ್ ಮಾಡಿದ್ದಾರೆ. 21 ಓವರ್ ಗಳನ್ನ ಹಾಕಿದ ಅರ್ಜುನ್ 95 ರನ್ ಗಳನ್ನ ನೀಡಿ 5 ವಿಕೆಟ್ ಪಡೆದಿದ್ದಾರೆ.
Comments