ರಾಹುಲ್ ದ್ರಾವಿಡ್ ಸರಳತೆಯ ನಡೆ ಎಲ್ಲರಿಗೂ ಆದರ್ಶಪ್ರಾಯವಾಗುವಂತದ್ದು

ರಾಹುಲ್ ದ್ರಾವಿಡ್ ಅವರ ಸರಳತೆಗೆ ಉದಾಹರಣೆಯಾಗುವಂತಹ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ. ವಿಜ್ಞಾನ ಮೇಳವೊಂದಕ್ಕೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ರಾಹುಲ್ ದ್ರಾವಿಡ್ ಜನ ಸಾಮಾನ್ಯರಂತೆ ಸರದಿಯ ಸಾಲಿನಲ್ಲಿ ನಿಂತು ಮೇಳ ವೀಕ್ಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋ ಹರಿದಾಡುತ್ತಿದ್ದು, ಕನ್ನಡಿಗ ದ್ರಾವಿಡ್ ಸರಳತೆಯನ್ನು ಹಾಡಿ ಹೊಗಳಿದ್ದಾರೆ. ವಿಶ್ವ ಕ್ರಿಕೆಟ್ ಲೋಕವೇ ರಾಹುಲ್ರ ಸಾಧನೆ ಹಾಗೂ ವ್ಯಕ್ತಿತ್ವದ ಕುರಿತು ಅತ್ಯಂತ ಗೌರವ ಹಾಗೂ ಅಭಿಮಾನದಿಂದ ಮಾತನಾಡುತ್ತದೆ. ಆದರೆ, ಅದರ ಬಗ್ಗೆ ಕೊಂಚವೂ ಗರ್ವ ತೋರಿಸದ ದ್ರಾವಿಡ್ ಅವರ ಈ ನಡೆ ಎಲ್ಲರಿಗೂ ಆದರ್ಶಪ್ರಾಯವಗುವಂತಹದು.
Comments