ಪ್ರೀತಿಯ ಪಿಚ್ನಲ್ಲಿ ಭುವಿ ಕ್ಲೀನ್ ಬೌಲ್ಡ್

ಒಂಟಿ ಬಾಳ ಪಯಣದಲ್ಲಿ ಜಂಟಿ ಆಗಲು ತುದಿಗಾಲಲ್ಲಿ ನಿಂತಿರುವ ಟೀಂ ಇಂಡಿಯಾದ ಸ್ವಿಂಗ್ ಸುಲ್ತಾನ್ ಭುವನೇಶ್ವರ್, ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಲು ರೆಡಿಯಾಗಿದ್ದಾರೆ. ನೂಪುರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಕಮೆಂಟ್ ಮಾಡಿರುವ ಶಿಖರ್ ಧವನ್ ಮತ್ತೊಬ್ಬ ಹೆಂಡತಿಯ ಗುಲಾಮ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾನೆ ಎಂದು ಭುವಿ ಕಾಲೆಳೆದಿದ್ದಾರೆ. ಅಲ್ಲದೆ, ಭುವಿ ಮದುವೆಗೆ ಶುಭ ಹಾರೈಸಿದ್ದಾರೆ. ಇನ್ನು ಬ್ಯಾಚುಲರ್ ಲೈಫ್ನಿಂದ ಮ್ಯಾರಿಡ್ ಲೈಫ್ಗೆ ಹೋಗುತ್ತಿರುವ ಬಗ್ಗೆ ಧವನ್ ಅವರು ಭುವಿಯ ಅಭಿಪ್ರಾಯವನ್ನು ಕೇಳಿದ್ದು, ಅದರ ವಿಡಿಯೋ ಕೂಡಾ ಮಾಡಿದ್ದಾರೆ. ಇವರಿಬ್ಬರ ನಡುವಿನ ಚರ್ಚೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments