ಶ್ರೀಲಂಕಾಗೆ 35 ಓವರ್ ಗಳಲ್ಲಿ 231 ರನ್ ಗುರಿ

ಭಾರತ ನೀಡಿರುವ ರನ್ ಗಳ ಗುರಿ ಶ್ರೀಲಂಕಾ ತಂಡಕ್ಕೆ ಸವಾಲಿನದಾಗಿದ್ದು, 231 ರನ್ ಗಳನ್ನು ಲಂಕಾ ಪಡೆ ಕೇವಲ 35 ಓವರ್ ಗಳಲ್ಲಿ ಗಳಿಸಬೇಕಿದೆ. ಅಂದರೆ 210 ಎಸೆತಗಳಲ್ಲಿ ಲಂಕಾ ತಂಡ 231 ರನ್ ಗಳನ್ನು ಪೇರಿಸಬೇಕಿದೆ. ಇಂದು ವಾತಾವರಣ ಕೂಡ ಆಟಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಲಂಕಾ ತಂಡ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರೆ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ.
ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 352 ರನ್ ಗಳಿಸಿ ತನ್ನ ಎರಡನೇ ಇನ್ನಿಂಗ್ಸ್ ಗಳನ್ನು ಡಿಕ್ಲೇರ್ ಮಾಡಿಕೊಂಡಿದ್ದು, ಲಂಕಾಗೆ ಗೆಲ್ಲಲು 231 ರನ್ ಗಳ ಸವಾಲಿನ ಗುರಿ ನೀಡಿದೆ. ಮಳೆ ಹಾಗೂ ಕಳಪೆ ಬ್ಯಾಟಿಂಗ್ ನಿಂದ ಮೊದಲ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಶಿಖರ್ ಧವನ್ (94 ರನ್), ಕೆಎಲ್ ರಾಹುಲ್ (74 ರನ್) ಹಾಗೂ ನಾಯಕ ಕೊಹ್ಲಿ (ಅಜೆಯೇ 104 ರನ್) ಅವರ ಬ್ಯಾಟಿಂಗ್ ನೆರವಿನಿಂದ ಎರಡನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಶ್ರೀಲಂಕಾಗೆ ಗೆಲ್ಲಲು 231 ರನ್ ಗಳ ಸವಾಲಿನ ಗುರಿ ನೀಡಿತು. ಇನ್ನು ಶ್ರೀಲಂಕಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಕಾಡಿದ್ದ ಲಕ್ಮಲ್ ಎರಡನೇ ಇನ್ನಿಂಗ್ಸ್ ನಲ್ಲೂ ಭಾರತೀಯ ಬ್ಯಾಟ್ಸಮನ್ ಗಳನ್ನು ಕಾಡಿದರು. ಕೇವಲ 26 ರನ್ ಗಳನ್ನು ನೀಡಿ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಗಮಾಗೆ, ಶಣಕ ಮತ್ತು ಪೆರೆರಾ ತಲಾ 2 ವಿಕೆಟ್ ಪಡೆದರು.
Comments