ಕ್ವಾರ್ಟರ್ ಫೈನಲ್ಸ್ ಎಂಟ್ರಿ ಕೊಟ್ಟ ಸಿಂಧು
40 ನಿಮಿಷದ ಪಂದ್ಯದಲ್ಲಿ ಸಿಂಧು 21-15, 21-13 ಸೆಟ್ ಗಳಲ್ಲಿ ಎದುರಾಳಿಯನ್ನು ಪರಾಭವಗೊಳಿಸಿ ಸಾಧನೆ ಮಾಡಿದ್ದಾರೆ. ಸಿಂಧು ಅವರು ಚೀನಾ ಓಪನ್ ಸರಣಿಯಲ್ಲಿ ಭಾರತೀಯರ ಪಾಲಿನ ಏಕೈಕ ಭರವಸೆಯಾಗಿ ಉಳಿದಿದ್ದು ಅವರು ತಮ್ಮ ಮುಂದಿನ ಸುತ್ತಿನಲ್ಲಿ ಚೀನಾದ ಗಾವೊ ಫಾಂಗ್ಜಿ ಅವರನ್ನು ಎದುರಿಸಲಿದ್ದಾರೆ.
ಚೀನಾ ಓಪನ್ ಸೂಪರ್ ಸೀರೀಸ್ ನಲ್ಲಿ ವಿಶ್ವದ ನಂ 2 ಭಾರತದ ಪಿ.ವಿ. ಸಿಂಧು, ಚೀನಾದ ಹಾನ್ ಯುಯಿ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ್ದಾರೆ. ಚೀನಾದ ಶಾಂಘೈ ನಲ್ಲಿ ಈ ಪಂದ್ಯ ನಡೆಯಲಿದ್ದು ಭಾರತೀಯ ಕ್ರೀಡಾ ತಾತ್ರೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಭಾರತದ ಇನ್ನೋರ್ವ ಮಹಿಳಾ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪುರುಷರ ವಿಭಾಗದ ಭರವಸೆ ಪ್ರಣಯ್ ಇದಾಗಲೇ ಸೋತು ಟುರ್ನಿಯಿಂದ ಹೊರಬಿದ್ದಿದ್ದಾರೆ.
Comments