ದೆಹಲಿಯ ವಾಯುಮಲಿನ್ಯದ ಬಗ್ಗೆ ಟ್ವಟರ್ ನಲ್ಲಿ ಕೊಹ್ಲಿ ಹೇಳಿರುವುದೇನು ?
ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ವಾಯು ಮಾಲಿನ್ಯ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ನಿವಾಸಿಗಳಿಗೆ ವಾಯು ಮಾಲಿನ್ಯ ನಿಯಂತ್ರಿಸಲು ಸಲಹೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಟರ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.
ನಾವು ಮಾಲಿನ್ಯದ ವಿರುದ್ಧ ಮ್ಯಾಚ್ ಗೆಲ್ಲಬೇಕಾದರೆ, ನಾವೆಲ್ಲರೂ ಒಟ್ಟಾಗಿ ಸೇರಿ ಆಡಿದರೆ ಮಾತ್ರ ಮ್ಯಾಚ್ ಗೆಲ್ಲಲು ಸಾಧ್ಯವಾಗುತ್ತದೆ. ಏಕೆಂದರೆ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಶೇಷವಾಗಿ ದೆಹಲಿ ನಿವಾಸಿಗಳ ಆದ್ಯ ಕರ್ತವ್ಯವಾಗಿದೆ. ಖಾಸಗಿ ವಾಗಹನಗಳನ್ನ ಬಳಸುವುದು ಬಿಟ್ಟು ಸಾರಿಗೆ ಬಸ್, ಮೆಟ್ರೋ, ಸೋಲಾರ್ ಕ್ಯಾಬ್ ಗಳಲ್ಲಿ ಸಂಚರಿಸಿ. ಒಂದು ವೇಳೆ ವಾರದಲ್ಲಿ ಒಂದು ದಿನ ನೀವು ಹೀಗೆ ಮಾಡಿದರೆ ತುಂಬಾ ಬದಲಾವಣೆ ಆಗುತ್ತದೆ. ಕ್ರಿಯೆ ಚಿಕ್ಕದೋ ಅಥವಾ ದೊಡ್ಡದೋ ಇರಲಿ. ಅದರಿಂದ ಸ್ವಲ್ಪವಾದರೂ ಮಲಿನತೆ ಕಡಿಮೆಯಾಗುತ್ತದೆ ಎಂದು ವಿಡಿಯೋದಲ್ಲಿ ಕೊಹ್ಲಿ ಹೇಳಿದ್ದಾರೆ.
Comments