ಅಶ್ವಿನ್ ಹಾಗೂ ಪ್ರೀತಿಯ ರಹಸ್ಯ ಈ ಕ್ಯೂಟ್ ಸಂಭಾಷಣೆಯಲ್ಲಿದೆ ನೋಡಿ

ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಪ್ರೀತಿ ಅಶ್ವಿನ್ ಇತ್ತೀಚೆಗಷ್ಟೆ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆಯನಿವರ್ಸರಿ ಹಿನ್ನೆಲೆಯಲ್ಲಿ ಸ್ವೀಟ್ ಮೆಸೇಜ್ ಮೂಲಕ ಅಶ್ವಿನ್ ಪತ್ನಿಗೆ ಶುಭ ಹಾರೈಸಿದ್ರು. 6 ವರ್ಷಗಳು 6 ಕ್ಷಣಗಳಂತೆ ಕಳೆದು ಹೋಗಿದ್ದು, ಕಷ್ಟ-ಸುಖ ಎರಡರಲ್ಲೂ ಸಾಥ್ ಕೊಟ್ಟಿದ್ದ ಪತ್ನಿಗೆ ಅಶ್ವಿನ್ ಧನ್ಯವಾದ ಹೇಳಿದ್ರು.
ಈ ಮೆಸೇಜ್ ಗೆ ಪತ್ನಿ ಪ್ರೀತಿ ಸಖತ್ ಫನ್ನಿಯಾಗಿ ರಿಪ್ಲೈ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮಿಬ್ಬರ ಫಸ್ಟ್ ನೈಟ್ ಸೀಕ್ರೆಟ್ ಒಂದನ್ನು ಕೂಡ ಬಹಿರಂಗಪಡಿಸಿದ್ದಾರೆ. ಮೊದಲ ರಾತ್ರಿ ಅಶ್ವಿನ್ ಗೆ ನಿದ್ದೆ ಮಾಡಲು ಬಿಡು, ಯಾಕಂದ್ರೆ ಮರುದಿನ ಕ್ರಿಕೆಟ್ ಪಂದ್ಯದಲ್ಲಿ ಅವರು ಆಡಬೇಕಿದೆ ಅಂತಾ ಕುಟುಂಬದವರೆಲ್ಲ ಪ್ರೀತಿಗೆ ಸಲಹೆ ಕೊಟ್ಟಿದ್ದರಂತೆ. ಆದ್ರೆ ಟೀಂ ಇಂಡಿಯಾ ಆಟಗಾರರು ಅಶ್ವಿನ್ ಗೆ ಕೀಟಲೆ ಮಾಡಲು ಸಖತ್ ಪ್ಲಾನ್ ಮಾಡಿಬಿಟ್ಟಿದ್ರು. ಅಶ್ವಿನ್ ಮಲಗೋ ಕೋಣೆಯಲ್ಲಿ ಎಲ್ಲಾ ಕಡೆ ಅಲಾರಾಂ ಅಡಗಿಸಿಟ್ಟಿದ್ರು. ಅರ್ಧರ್ಧ ಗಂಟೆಗೂ ಅಲಾರಾಂ ಹೊಡೆದುಕೊಂಡಿದ್ರಿಂದ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ ಪ್ರೀತಿ. ಅಶ್ವಿನ್ ಹಾಗೂ ಪ್ರೀತಿಯ ಈ ಕ್ಯೂಟ್ ಸಂಭಾಷಣೆ ವೈರಲ್ ಆಗಿದೆ.
Comments