ಸಚಿನ್ ತೆಂಡೂಲ್ಕರ್ ರನ್ನ ಶ್ಲಾಘಿಸಿದ ವಿಶ್ವಸಂಸ್ಥೆ
ಸಚಿನ್ ತೆಂಡೂಲ್ಕರ್ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿರುವುದು ಬಹಳ ಖುಷಿಯ ವಿಚಾರ ಅವರ ಈ ಕಾರ್ಯ ಯುವಜನತೆಗೆ ಮತ್ತಷ್ಟು ಪ್ರೇರಣೆಯಾಗಲಿದೆ ಎಂದರು.
ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಿರುವ ಅವರ ಕಾರ್ಯಕ್ಕೆ ವಿಶ್ವಸಂಸ್ಥೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಹಿರಿಯ ರಾಜತಾಂತ್ರಿಕ ಶ್ರೀನಿವಾಸ್ ಪ್ರಸಾದ್ ಅವರು ವಿಶ್ವ ಸಂಸ್ಥೆಯ ಕ್ರೀಡಾಭಿವೃದ್ಧಿ ಹಾಗೂ ಶಾಂತಿ ಕುರಿತು ನಡೆಯುತ್ತಿದ್ದ ಕಲಾಪದ ವೇಳೆ ಸಚಿನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments