ನನ್ನ ಜೀವನದಲ್ಲಿ ಲಕ್ಕಿ ಗರ್ಲ್ ಬರ್ತಿದ್ದಂತೆ ನನ್ನ ಅದೃಷ್ಟ ಬದಲಾಯ್ತು ಎಂದ ಕೊಹ್ಲಿ
ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ ನಲ್ಲಿ ಮಾತನಾಡಿದ ಕೊಹ್ಲಿ, ಪ್ರೇಯಸಿ ಅನುಷ್ಕಾ ಶರ್ಮಾರನ್ನು ಹಾಡಿ ಹೊಗಳಿದ್ದಾರೆ. ಅನುಷ್ಕಾ ತನ್ನ ಬಾಳಿನ ಲಕ್ಕಿ ಗರ್ಲ್ ಎಂದಿದ್ದಾರೆ ಕೊಹ್ಲಿ. 2014ರಲ್ಲಿ ಇಂಗ್ಲೆಂಡ್ ಪ್ರವಾಸ ಚೆನ್ನಾಗಿರಲಿಲ್ಲ. ಈ ವೇಳೆ ಅನುಷ್ಕಾ ನನಗೆ ಸಾಕಷ್ಟು ಬೆಂಬಲ ನೀಡಿದ್ದರು ಎಂದಿದ್ದಾರೆ ವಿರಾಟ್ ಕೊಹ್ಲಿ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕೊಹ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಪ್ರೇಯಸಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ ಕೊಹ್ಲಿ, ಅನುಷ್ಕಾ ಶರ್ಮಾರಿಂದ ತಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದಿದ್ದಾರೆ. ನನಗೆ ಸಮಾಧಾನ ಹೇಳಿ ನನಗೆ ಭರವಸೆ ತುಂಬಿದ್ರು. ನಂತ್ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾನು ಒಳ್ಳೆ ಪ್ರದರ್ಶನ ತೋರಿದ್ದೆ. ಆಗ ನನಗೆ ಹಾಗೂ ಅನುಷ್ಕಾಗೆ ತುಂಬಾ ಖುಷಿಯಾಗಿತ್ತು ಎಂದಿದ್ದಾರೆ ಕೊಹ್ಲಿ. ನನಗೆ ಮೊದಲಿಂದಲೂ ಅದೃಷ್ಟವಿರಲಿಲ್ಲ. ಆದ್ರೆ ನನ್ನ ಜೀವನದಲ್ಲಿ ಅನುಷ್ಕಾ ಬರ್ತಿದ್ದಂತೆ ನನ್ನ ಅದೃಷ್ಟ ಬದಲಾಯ್ತು ಎಂದ ಕೊಹ್ಲಿ, ಸಂದರ್ಶನದ ವೇಳೆ ಸಚಿನ್, ಮಹೇಂದ್ರ ಸಿಂಗ್ ಧೋನಿ ಹಾಗೂ ತಮ್ಮ ಜೀವನವನ್ನು ಹೋಲಿಸಿಕೊಂಡು ಕೆಲವೊಂದು ವಿಷ್ಯವನ್ನು ಹೇಳಿದ್ದಾರೆ.
Comments