ಭಾರತದ ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

ಪ್ರೊ ಕಬಡ್ಡಿ 5ನೇ ಆವೃತ್ತಿಯ ಪಾಟ್ನಾ ಮತ್ತು ಹರಿಯಾಣ ನಡುವಿನ ಪಂದ್ಯದಲ್ಲಿ, ಪಾಟ್ನಾ ಪರ ರೈಡರ್ ಪ್ರದೀಪ್ ನರ್ವಾಲ್ ಎದುರಾಳಿ ತಂಡದಲ್ಲಿದ್ದ ಎಲ್ಲಾ ಆರು ಮಂದಿ ಆಟಗಾರರನ್ನು ಔಟ್ ಮಾಡಿದರು. ಆರು ಔಟ್ ಆಗು ತಂಡ ಆಲೌಟ್ ಆಗಿದ್ದಕ್ಕೆ ಬೋನಸ್ ಎರಡು ಅಂಕ ಸೇರಿ ಒಂದೇ ರೈಡ್ ನಲ್ಲಿ ಎಂಟು ಅಂಕ ಸಂಪಾದಿಸಿದ್ದರು.
ಪಾಟ್ನಾ ಪರ ರೈಡರ್ ಪ್ರದೀಪ್ ನರ್ವಾಲ್ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ರೈಡ್ ನಲ್ಲಿ ಎಂಟು ಅಂಕ ಸಂಪಾದಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಪ್ರೊ ಕಬಡ್ಡಿ 5ನೇ ಆವೃತ್ತಿಯ ಪಾಟ್ನಾ ಮತ್ತು ಹರಿಯಾಣ ನಡುವಿನ ಪಂದ್ಯದಲ್ಲಿ ಪಾಟ್ನಾ ಪರ ರೈಡರ್ ಪ್ರದೀಪ್ ನರ್ವಾಲ್ ಎದುರಾಳಿ ತಂಡದಲ್ಲಿದ್ದ ಎಲ್ಲಾ ಆರು ಮಂದಿ ಆಟಗಾರರನ್ನು ಔಟ್ ಮಾಡಿದರು. ಆರು ಔಟ್ ಆಗು ತಂಡ ಆಲೌಟ್ ಆಗಿದ್ದಕ್ಕೆ ಬೋನಸ್ ಎರಡು ಅಂಕ ಸೇರಿ ಒಂದೇ ರೈಡ್ ನಲ್ಲಿ ಎಂಟು ಅಂಕ ಸಂಪಾದಿಸಿದ್ದರು. ಪ್ರದೀಪ್ ನರ್ವಾಲ್ ಚಾಣಾಕ್ಷತೆಗೆ ಎಲ್ಲಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದ್ದು ನರ್ವಾಲ್ ರೈಡಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
Comments