ಕರುಣ್, ರಾಹುಲ್ ಭರ್ಜರಿ ಆಟದಿಂದ ಕರ್ನಾಟಕಕ್ಕೆ ಜಯ

ಭಾರತ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡವು ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಮಂಡಳಿ ಅಧ್ಯಕ್ಷರ ಇಲೆವನ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ ಸೋಲುಂಟಾಗಿದೆ.
ಕಿವೀಸ್ ವಿರುದ್ಧ ಕರ್ನಾಟಕ ಮೂಲದ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಕರುಣ್ ನಾಯರ್ ಅವರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ 68 ರನ್ (75 ಎಸೆತಗಳು, 1x6, 9X4) ಮತ್ತು ಕರುಣ್ ನಾಯರ್ 78 (64 ಎಸೆತಗಳು, 12X4) ಅವರ ಅರ್ಧಶತಕದ ನೆರವಿನಿಂದ ಮಂಡಳಿ ಅಧ್ಯಕ್ಷರ ಇಲೆವನ್ ತಂಡಕ್ಕೆ 30 ರನ್ ಗಳ ಜಯ ಲಭಿಸಿದೆ. ಇವರಿಬ್ಬರಲ್ಲದೆ, 17 ವರ್ಷ ವಯಸ್ಸಿನ ಪೃಥ್ವಿ ಶಾ 66 ಎಸೆತಗಳಲ್ಲಿ 80ರನ್ ಗಳಿಸಿ ಗಮನ ಸೆಳೆದರು.
Comments